ಶಿವಮೊಗ್ಗ: ಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷ ಅವರ ಕುಟುಂಬಸ್ಥರು ಸುದ್ದಿಗೋಷ್ಠಿ ನಡೆಸಿ, ಸಾಂತ್ವನ ಹೇಳಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ತಂದೆ, ತಾಯಿ ಹಾಗು ಅಕ್ಕ ಈ ವೇಳೆ ಮಾತನಾಡಿದರು.
'ಎಲ್ಲ ಅಣ್ಣ-ತಮ್ಮಂದಿರಲ್ಲಿ ನನ್ನ ಸಹೋದರನನ್ನು ಕಾಣುತ್ತಿದ್ದೇವೆ. ನಮ್ಮ ಮೇಲೆ ಪ್ರೀತಿ ತೋರುತ್ತಿರುವುದಕ್ಕೆ ನಿಮಗೆಲ್ಲ ಧನ್ಯವಾದಗಳು. ಹರ್ಷ ಸಾವಿನ ಬಳಿಕ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನೆಲ್ಲ ನೋಡಿಕೊಂಡು ಬರುತ್ತೇವೆ. ಅವರಿಗೆ ನಮ್ಮ ಕೈಲಾದ ಸಹಾಯ ಮಾಡುತ್ತೇವೆ' ಎಂದು ಅಕ್ಕ ಅಶ್ವಿನಿ ತಿಳಿಸಿದರು.
'ನನಗೇನು ಮಾಡಬೇಕು, ಹೇಳಬೇಕು ಗೊತ್ತಾಗ್ತಿಲ್ಲ. ಹರ್ಷ ದೇಶಕ್ಕೋಸ್ಕರ ಬಂದ ದೇಶಕ್ಕೋಸ್ಕರ ಹೋದ. ಎಲ್ಲರಲ್ಲೂ ಹರ್ಷನನ್ನು ಕಾಣುತ್ತಿದ್ದೇನೆ. ಎಲ್ಲರಿಗೂ ನಾವು ಚಿರಋಣಿ' ಎಂದು ತಾಯಿ ಪದ್ಮ ಭಾವುಕರಾದರು.
ಶಿವಮೊಗ್ಗದಲ್ಲಿ ಭಾನುವಾರ ರಾತ್ರಿ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾಗಿದೆ. ಆ ಬಳಿಕ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿಷೇಧಾಜ್ಞೆ ಘೋಷಿಸಲಾಗಿದೆ.
ಇದನ್ನೂ ಓದಿ: ಹತ್ಯೆಗೂ ಮುನ್ನ ಹರ್ಷನಿಗೆ ಹುಡುಗಿಯರಿಂದ ವಿಡಿಯೋ ಕಾಲ್: ಕೊಲೆ ರಹಸ್ಯ ಬಿಚ್ಚಿಟ್ಟ ಸ್ನೇಹಿತ