ETV Bharat / city

ಕಾರಿನಲ್ಲಿ ಬಂದು ದರೋಡೆಗೆ ಯತ್ನ: ಗ್ರಾಮಸ್ಥರನ್ನು ಕಂಡು ಖದೀಮರು ಪರಾರಿ

ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಗ್ರಾಮದಲ್ಲಿ ದರೋಡೆಗೆ ಬಂದ ತಂಡ ಗ್ರಾಮಸ್ಥರನ್ನು ಕಂಡು ಪರಾರಿಯಾಗಿದೆ. ದರೋಡೆಕೋರರ ಗ್ರಾಮ ಪ್ರವೇಶ ಜನರ ಆತಂಕಕ್ಕೆ ಕಾರಣವಾಗಿದೆ.

author img

By

Published : Oct 13, 2020, 3:34 PM IST

A gang Attempt to robbery in Megaravalli village
ಇನೋವಾ ಕಾರಿನಲ್ಲಿ ಬಂದು ದರೋಡೆಗೆ ಯತ್ನ

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಗ್ರಾಮದಲ್ಲಿ ದರೋಡೆಗೆ ಬಂದ ಖದೀಮರು ಗ್ರಾಮಸ್ಥರನ್ನು ಕಂಡು ಪರಾರಿಯಾಗಿದ್ದಾರೆ.

A gang Attempt to robbery in Megaravalli village
ಹೆಗಡೆ ಕುಟುಂಬಕ್ಕೆ ಧೈರ್ಯ ತುಂಬಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್​

ನಿನ್ನೆ ರಾತ್ರಿ ಮೇಗರವಳ್ಳಿಯ ಪುರುಷೋತ್ತಮ್ ಹೆಗಡೆ, ಗಣೇಶ್ ಹೆಗಡೆ ಹಾಗೂ ರೇವಂತ್ ಹೆಗಡೆ ಅವರ ಮನೆ ಬಾಗಿಲು ಬಡಿದು ಮಚ್ಚು, ಲಾಂಗ್ ತೋರಿಸಿ ದರೋಡೆಗೆ ಯತ್ನಿಸಿದ್ದಾರೆ. ಈ ವೇಳೆ ಮನೆಯವರ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ. ಹೆಗಡೆ ಕುಟುಂಬಸ್ಥರ ಕೂಗಾಟ ಕೇಳಿ ಗ್ರಾಮಸ್ಥರು ಮನೆ ಬಳಿ ಬರುವಷ್ಟರಲ್ಲಿ ಕಾರಿನಲ್ಲಿ ಬಂದಿದ್ದ ದರೋಡೆಕೋರರು ಪರಾರಿಯಾಗಿದ್ದಾರೆ. ದರೋಡೆಕೋರರ ದಾಳಿಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ದರೋಡೆಕೋರರ ಕಾರಿನಲ್ಲಿ ಬಂದು ದರೋಡೆಗೆ ಯತ್ನ

ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮೇಗರವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಹೆಗಡೆ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.