ETV Bharat / city

ಅಹಮದಾಬಾದ್​ನಿಂದ ಬಂದ 8 ಜನರಲ್ಲಿ ಪಾಸಿಟಿವ್; ಆದ್ರೂ ಗ್ರೀನ್​ಝೋನ್​ನಲ್ಲೇ ಇರಲಿದೆ ಶಿವಮೊಗ್ಗ - Shimoga corona news

ಅಹಮದಾಬಾದ್​ಗೆ ತೆರಳಿ ವಾಪಸ್​ ಆದ 8 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇವರೆಲ್ಲರನ್ನೂ ಶಿವಮೊಗ್ಗದ ಸಿಮ್ಸ್ ಕೋವಿಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಇವರೆಲ್ಲಾ ಅಹಮದಾಬಾದ್​ನಿಂದ ಬಂದವರಾದ ಕಾರಣ ಶಿವಮೊಗ್ಗ ಜಿಲ್ಲೆಯನ್ನು ಇನ್ನೂ ಗ್ರೀನ್​ಝೋನ್​ನಲ್ಲಿಯೇ ಮುಂದುವರೆಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

k s eshwarappa
ಈಶ್ವರಪ್ಪ
author img

By

Published : May 10, 2020, 1:53 PM IST

Updated : May 10, 2020, 2:11 PM IST

ಶಿವಮೊಗ್ಗ: ನಿನ್ನೆ ಅಹಮದಾಬಾದ್​ನಿಂದ ಬಂದ 9 ಜನರಲ್ಲಿ 8 ಜನರಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಫೆಬ್ರವರಿ 27 ರಂದು ಇವರು ಶಿವಮೊಗ್ಗದಿಂದ ಅಹಮದಾಬಾದ್​ಗೆ ತೆರಳಿದ್ದರು. ಇವರು ನಿನ್ನೆ ವಾಪಸ್ ಆಗಿದ್ದಾರೆ. ಬಂದವರ ಸ್ವಾಬ್ ಟೆಸ್ಟ್ ನಡೆಸಲಾಗಿದೆ. ಇದರಲ್ಲಿ 8 ಜನರ ವರದಿ ಪಾಸಿಟಿವ್ ಬಂದಿದೆ.

ಈಶ್ವರಪ್ಪ ಸುದ್ದಿಗೋಷ್ಟಿ

ಇನ್ನೂಂದು ವರದಿಯನ್ನು ಮತ್ತೊಮ್ಮೆ ಟೆಸ್ಟ್​ಗೆ ಕಳುಹಿಸಲಾಗಿದೆ. 8 ಜನರಲ್ಲಿ 7 ಜನ‌ ಶಿಕಾರಿಪುರ ತಾಲೂಕಿನವರು ಹಾಗೂ ಓರ್ವ ತೀರ್ಥಹಳ್ಳಿ ತಾಲೂಕಿನವರು ಎಂದು ತಿಳಿದು ಬಂದಿದೆ. ಉಳಿದ ಓರ್ವ ಸಹ ಶಿಕಾರಿಪುರದವರು ಎಂದು ತಿಳಿದು ಬಂದಿದೆ. ಇದರಲ್ಲಿ ಶಿಕಾರಿಪುರದ ಪುರುಷ ರೋಗಿ-808 ರಿಂದ 815ರ ತನಕ ಇರುವ 8 ಜನರನ್ನು ಶಿವಮೊಗ್ಗದ ಸಿಮ್ಸ್ ಕೋವಿಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯಕ್ಕೆ ಇವರುಗಳು ಮಾತ್ರ ಆಸ್ಪತ್ರೆಯಲ್ಲಿದ್ದು, ಇವರ ಜೊತೆ ಪ್ರಥಮ ಹಾಗೂ ದ್ವೀತಿಯ ಸಂಪರ್ಕದಲ್ಲಿದ್ದವರನ್ನು ಸಂಜೆ ಒಳಗೆ ಪತ್ತೆ ಮಾಡಿ ಅವರನ್ನು ಸಹ ಕ್ವಾರಂಟೈನ್ ಮಾಡಲಾಗುತ್ತದೆ. ಸದ್ಯ ಇವರೆಲ್ಲಾ ಅಹಮದಾಬಾದ್​ನಿಂದ ಬಂದವರಾದ ಕಾರಣ ಶಿವಮೊಗ್ಗ ಜಿಲ್ಲೆಯನ್ನು ಇನ್ನೂ ಗ್ರೀನ್​ಝೋನ್​ನಲ್ಲಿಯೇ ಮುಂದುವರೆಸಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

ಇಷ್ಟು ದಿನ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸಿ, ಜಿಲ್ಲೆಯನ್ನು ಗ್ರೀನ್​ಝೋನ್​ನಲ್ಲಿಡಲು ಸಹಕರಿಸಿದ್ದರು. ಜಿಲ್ಲೆಯಲ್ಲಿ ಮುಂದೆ ಲಾಕ್​ಡೌನ್ ಹೆಚ್ಚು ಬಿಗಿಗೊಳಿಸುವ ಹಾಗೂ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಮುಂದೆ ಚರ್ಚಿಸಿ ತೀರ್ಮಾನ ತೆಗೆದು ಕೊಳ್ಳಲಾಗುವುದು. ಈಗಲಾದರೂ ಜಿಲ್ಲೆಯ ಜನ ಲಾಕ್​ಡೌನ್​ಅನ್ನು ಗಂಭೀರವಾಗಿ ಪರಿಗಣಿಸಿ, ಲಾಕ್ ಡೌನ್ ಆದೇಶ ಪಾಲಿಸಬೇಕು ಎಂದು ವಿನಂತಿ ಮಾಡಿಕೊಂಡರು.

Last Updated : May 10, 2020, 2:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.