ETV Bharat / city

ಹಣಕ್ಕಾಗಿ ಪ್ರಿಯಕರನಿಂದ ಒತ್ತಡ ಆರೋಪ: ಮನನೊಂದ ಯುವತಿ ಆತ್ಮಹತ್ಯೆಗೆ ಶರಣು - ಹಣಕ್ಕಾಗಿ ಪ್ರಿಯಕರನಿಂದ ಒತ್ತಡ ಯುವತಿ ಆತ್ಮಹತ್ಯೆ

ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಎನ್.ಆರ್ ಮೋಹಲ್ಲಾದಲ್ಲಿ ನಡೆದಿದೆ.

Mysore
ಮೈಸೂರು
author img

By

Published : Jun 11, 2022, 10:33 AM IST

ಮೈಸೂರು: ಹಣಕ್ಕಾಗಿ ಪ್ರಿಯಕರ ಹಾಗೂ ಆತನ ಸ್ನೇಹಿತರು ಒತ್ತಡ ಹೇರುತ್ತಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಎನ್.ಆರ್ ಮೋಹಲ್ಲಾದಲ್ಲಿ ನಡೆದಿದೆ. ಸಂಗೀತಾ (22) ಮೃತ ಯುವತಿಯಾಗಿದ್ದಾರೆ.

ಈಕೆ ಎನ್​​.ಆರ್ ಮೊಹಲ್ಲಾದ ಆಕಾಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈತ ಕೆಫೆ ಅಂಗಡಿ ತೆರೆಯುವ ಸಲುವಾಗಿ ಸಂಗೀತಾ ತಾಯಿಯ ಹೆಸರಿನಲ್ಲಿರುವ ಮನೆ ಮೇಲೆ ಸಾಲ ಪಡೆದು ಹಣ ಕೊಡುವಂತೆ ಒತ್ತಡ ಹೇರುತ್ತಿದ್ದನಂತೆ. ಇದರಿಂದ ಮನನೊಂದು ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಆಕೆಯ ತಾಯಿ, ಪ್ರಿಯಕರ ಆಕಾಶ್​ ಹಾಗೂ ಆತನ ಸ್ನೇಹಿತರ ವಿರುದ್ಧ ಎನ್.ಆರ್ ಠಾಣೆಗೆ ದೂರು ನೀಡಿದ್ದಾರೆ.

ನನ್ನ ಮಗಳು ಕಳೆದ ಮೇ 7ರಂದು ಈ ವಿಚಾರವನ್ನು ತಿಳಿಸಿದ್ದಳು. ಹಣಕಾಸಿನ ವಿಚಾರವಾಗಿ ಪ್ರಿಯಕರ ಆಕಾಶ್, ಆತನ ಸ್ನೇಹಿತರಾದ ಸತ್ಯ ಮತ್ತು ಸ್ನೇಹಿತೆ ಟೀನಾ ನನ್ನ ಮಗಳಿಗೆ ಕರೆ ಮಾಡಿ ಒತ್ತಡ ಹೇರಿದ್ದಾರೆ. ಈ ವೇಳೆ, ತಾನು ಇವರಿಂದ ಮಾನಸಿಕ ಹಿಂಸೆಗೆ ಒಳಗಾಗಿದ್ದು, ನಾನು ಸತ್ತರೆ ಅವರೇ ಕಾರಣ ಎಂದು ಮಗಳು ನನ್ನ ಜೊತೆ ಹೇಳಿಕೊಂಡಿದ್ದಳು ಎಂದು ಮೃತ ಸಂಗೀತಾ ತಾಯಿ ಭಾಗ್ಯ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಸಂಗೀತಾಳ ಪ್ರಿಯಕರ ಆಕಾಶ್ ಸ್ನೇಹಿತರಾದ ಸತ್ಯ ಮತ್ತು ಟೀನಾ ವಿರುದ್ಧ ಎನ್.ಆರ್ ಠಾಣೆಯ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್​​​ಗೆ ಕಾರು ಡಿಕ್ಕಿ: ವಕೀಲ, ಕಕ್ಷಿದಾರ ಸ್ಥಳದಲ್ಲೇ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.