ETV Bharat / city

ಕ್ಯಾನ್ಸರ್‌ನಿಂದ ದೂರವಿರಲು ನಟ ಮಂಡ್ಯ ರಮೇಶ್ ನೀಡಿದ್ರು ಈ ಸಲಹೆ - ಮೈಸೂರು ಕ್ಯಾನ್ಸರ್​ ದಿನಾಚರಣೆ

ವಿಶ್ವ ಕ್ಯಾನ್ಸರ್ ದಿನಾಚರಣೆ ನಿಮಿತ್ತ ಸುಯೋಗ್ ಆಸ್ಪತ್ರೆ, ಸಂಜೀವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್ ಮತ್ತು ಮಹಾರಾಣಿ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ದೇವರಾಜ ಅರಸು ರಸ್ತೆಯಿಂದ ಕಲಾಮಂದಿರದವರೆಗೆ ಜನ ಜಾಗೃತಿ ಜಾಥಾ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾಸ್ಯ ನಟ ಮಂಡ್ಯ ರಮೇಶ್​ ಮಾತನಾಡಿ, ಸಕಾರಾತ್ಮಕ ಚಿಂತನೆಯ ಜೀವನ ನಡೆಸುವ ಮೂಲಕ ಕ್ಯಾನ್ಸರ್​ಅನ್ನು ದೂರವಿಡಿ ಎಂದು ಕರೆ ನೀಡಿದರು.

world-cancer-day-celebrated-in-mysore
ಮಂಡ್ಯ ರಮೇಶ್
author img

By

Published : Feb 4, 2020, 4:57 PM IST

Intro:ಮೈಸೂರು: ಕ್ಯಾನ್ಸರ್ ರೋಗ ಬರದಂತೆ ಎಚ್ಚರಿಕೆ ವಹಿಸಬೇಕು, ಅದಕ್ಕಾಗಿ ಸಕಾರಾತ್ಮಕ ಜೀವನ ನಡೆಸಿ ಕ್ಯಾನ್ಸರ್ ನಿಂದ ದೂರವಿರಿ ಎಂದು ಕಾರ್ಯಕ್ರಮದಲ್ಲಿ ಹಾಸ್ಯ ನಟ ಮಂಡ್ಯ ರಮೇಶ್ ಹೇಳಿದರು.
Body:





ಇಂದು ವಿಶ್ವ ಕ್ಯಾನ್ಸರ್ ದಿನಾಚರಣೆಯಾಗಿದ್ದು , ಸುಯೋಗ್ ಆಸ್ಪತ್ರೆ , ಸಂಜೀವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್ ಮತ್ತು ಮಹಾರಾಣಿ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ನಗರದ ದೇವರಾಜ ಅರಸು ರಸ್ತೆಯಿಂದ ಕಲಾಮಂದಿರದ ವರೆಗೂ ಜಾಥ ನಡೆಸಲಾಗಿದ್ದು , ಕ್ಯಾನ್ಸರ್ ತಡೆಗಟ್ಟುವುದರ ಬಗ್ಗೆ ಅರಿವು ಮೂಡಿಸಿದ ಮಕ್ಕಳು ಹಾಗೂ ಇದರ ಅಂಗವಾಗಿ ಕಲಾಮಂದಿರದಲ್ಲಿ ಕಾರ್ಯಕ್ರಮ ಏರ್ಪಟ್ಟಿಸಿದ್ದು, ಕಾರ್ಯಕ್ರಮವನ್ನು ರಂಗಭೂಮಿ ಕಲಾವಿದ ಹಾಗೂ ಹಾಸ್ಯ ನಟ ಮಂಡ್ಯ ರಮೇಶ್ ಉದ್ಘಾಟಿಸಿ ಕ್ಯಾನ್ಸರ್ ಕುರಿತು ಕೆಲವು ಮಾಹಿತಿ ನೀಡಿದರು ರೋಗ ಬರುವುದಕ್ಕೆ ಮುಂಚೆಯೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ, ನಕಾರಾತ್ಮಕವಾಗಿ ಜೀವನ ನಡೆಸಿದರೆ ಕ್ಯಾನ್ಸರ್ ಬಂದಿದೆ ಎಂದರ್ಥ ಸಕಾರಾತ್ಮಕವಾಗಿ ಚಿಂತಿಸಿ ಎಂದು ಮಂಡ್ಯ ರಮೇಶ್ ರವರು ಸಲಹೆ ನೀಡಿದರು. ಇನ್ನೂ ಈ ಕಾರ್ಯಕ್ರಮದಲ್ಲಿ ಮೇಯರ್ ತಸ್ನಿಂ ಹಾಗೂ ಸುಯೋಗ್ ಆಸ್ಪತ್ರೆಯ ವ್ಯವಸ್ಥಾಪಕರು, ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.