ETV Bharat / city

ಬಕೆಟ್​ನಲ್ಲಿ ಮುಳುಗಿಸಿ ಮಗುವನ್ನು ಕೊಂದು ನೇಣಿಗೆ ಶರಣಾದ ತಾಯಿ - ಮಗು ಕೊಂದು ನೇಣು ಹಾಕಿಕೊಂಡ ತಾಯಿ

2 ವರ್ಷದ ಮಗುವನ್ನು ನೀರು ತುಂಬಿದ ಬಕೆಟ್​​ನಲ್ಲಿ ಮುಳುಗಿಸಿ ಕೊಂದು ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಗಟ್ಟವಾಡಿಯಲ್ಲಿ ಜರುಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

woman-committed-suicide-after-she-kill-her-son
ಮಗುವನ್ನು ಕೊಂದು ನೇಣಿಗೆ ಶರಣಾದ ತಾಯಿ
author img

By

Published : Dec 16, 2021, 8:20 PM IST

ಮೈಸೂರು: ಎರಡು ವರ್ಷದ ಮಗುವನ್ನು ನೀರು ತುಂಬಿದ ಬಕೇಟ್​ನಲ್ಲಿ ಮುಳುಗಿಸಿ ಕೊಂದು ತಾಯಿ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕು ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ.

ಬಕೆಟ್​ನಲ್ಲಿ ಮುಳುಗಿಸಿ ಮಗುವನ್ನು ಕೊಂದು ನೇಣಿಗೆ ಶರಣಾದ ತಾಯಿ

ಗಟ್ಟವಾಡಿ ಗ್ರಾಮದ ಮಹದೇವ ಪ್ರಸಾದ್ ಅಲಿಯಾಸ್ ರಚ್ಚು ಎಂಬುವರ ಪತ್ನಿ ಅನ್ನಪೂರ್ಣ (22) ಮೃತ ಮಹಿಳೆ ಹಾಗೂ ಮೋಕ್ಷಿತ್ (2) ಸಾವನ್ನಪ್ಪಿದ ಮಗು. ಚಾಮರಾಜನಗರ ಜಿಲ್ಲೆಯ ಉಮ್ಮತ್ತೂರು ಗ್ರಾಮದ ಅನ್ನಪೂರ್ಣ ಎರಡು ವರ್ಷಗಳ ಹಿಂದೆ ಕೃಷಿಕ ಮಹದೇವ ಪ್ರಸಾದ್ ಎಂಬುವರ ಜೊತೆ ವಿವಾಹ ಮಾಡಿಕೊಡಲಾಗಿತ್ತು.

ಮಗು ಕೊಂದು ನೇಣು ಹಾಕಿಕೊಂಡ ತಾಯಿ: ಆದರೆ, ಇಂದು 2 ವರ್ಷದ ಮಗುವನ್ನು ನೀರಿನ ತೊಟ್ಟಿಗೆ ಮುಳುಗಿಸಿ ಕೊಂದ‌ ನಂತರ ತಾಯಿ ಅನ್ನಪೂರ್ಣ ನೇಣಿಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ನಿಖರವಾದ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ನಂಜನಗೂಡು ಠಾಣಾ ಡಿವೈಎಸ್ಪಿ ಗೋವಿಂದ ರಾಜು, ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ ದೊಡ್ಡಕವಲಂದೆ, ಪಿಎಸ್​ಐ ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನಂಜನಗೂಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.