ETV Bharat / city

ಕಾಡಾನೆಗಳ ನಿರಂತರ ದಾಳಿ.. ಅಕಾಲಿಕ ಮಳೆಗೆ ಕಂಗಾಲಾಗಿದ್ದ ರೈತರ ಹೊಟ್ಟೆ ಮೇಲೆ ಬರೆ

author img

By

Published : Nov 23, 2021, 7:47 PM IST

ಮೈಸೂರು ಜಿಲ್ಲೆಯ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಪ್ರತಿದಿನ ರೈತರ ಜಮೀನಿಗೆ ನುಗ್ಗುವ ಆನೆಗಳಿಂದ ಅಪಾರ ಪ್ರಮಾಣದ ಬೆಳೆ ಹಾನಿ ಆಗುತ್ತಿದೆ. ಅಲ್ಲದೆ, ರಾತ್ರಿ ವೇಳೆ ಬೆಳೆ ಕಾಯುವ ರೈತರು ಪ್ರಾಣ ಭಯದಲ್ಲಿಯೇ ಜೀವನ ಸಾಗಿಸುವಂತಾಗಿದೆ.

wild-elephants-destroy-crops-in-mysore-district
ಕಾಡಾನೆ ಹಾವಳಿ

ಮೈಸೂರು: ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮುಂದುವರೆದಿದೆ. ಅರಣ್ಯ ಇಲಾಖೆ ತಡೆಗೋಡೆ ಹಾಕಿದ್ದರು ಕೂಡ ಕಾಡಾನೆಗಳು ಕಾಡಂಚಿನ ಗ್ರಾಮಗಳ ಜಮೀನಿನ ಫಸಲು ತಿಂದು, ಬೆಳೆ ಹಾನಿ ಮಾಡುತ್ತಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.‌

ಅಕಾಲಿಕ ಮಳೆಯಿಂದಾಗಿ ಈಗಾಗಲೇ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇದರ ಜೊತೆಗೆ ಆನೆಗಳ ಹಾವಳಿಯಿಂದಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಅಲ್ಲದೇ ರಾತ್ರಿ ವೇಳೆ ಬೆಳೆ ಕಾವಲು ಕಾಯುವ ರೈತ ಭಯದಿಂದ‌ ದಿನದೂಡುವ ಸ್ಥಿತಿ ನಿರ್ಮಾಣವಾಗಿದೆ. ‌

ಅಕಾಲಿಕ ಮಳೆಗೆ ಕಂಗಾಲಾಗಿದ್ದ ರೈತರ ಹೊಟ್ಟೆ ಮೇಲೆ ಬರೆ

ಸರಗೂರಿನಲ್ಲಿ ಕಾಡಾನೆ ದಾಳಿ, ಕೂದಲೆಳೆಯಲ್ಲಿ ರೈತ ಬಚಾವ್

ಸರಗೂರು ತಾಲೂಕಿನ ಹಲಸೂರು ಗ್ರಾಮದ ಮುಂಭಾಗದ ಜಮೀನಿಗೆ ಕಾಡಾನೆಗಳ ಹಿಂಡು ಲಗ್ಗೆಯಿಟ್ಟಿದ್ದು, ಜಮೀನಿನಲ್ಲಿ ರಾಗಿ ಬೆಳೆ ಕಾವಲು ಕಾಯುತ್ತಿದ್ದ ರೈತ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಲ್ಲದೆ, ಅದೇ ಗ್ರಾಮದ ಶ್ರೀಕಂಠರಾಜೇ ಅರಸ್ ಎಂಬುವರ ಜಮೀನಿಗೆ ನುಗ್ಗಿ, 4 ಎಕರೆ ರಾಗಿ ಬೆಳೆ, 20ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ನಾಶ ಮಾಡಿವೆ. 5 ಕಾಡಾನೆಗಳು ನಿರಂತರವಾಗಿ 2 ತಿಂಗಳಿಂದ ಗ್ರಾಮದತ್ತ ಧಾವಿಸುತ್ತಿವೆ. ಸರಗೂರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಗ್ರಾಮಸ್ಥರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲವಂತೆ.

ಹನಗೋಡುವಿನಲ್ಲಿ ಕಾಡಾನೆ ಕಾಡಿಗಟ್ಟಲು ಹರಸಾಹಸ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ನಾಡಿಗೆ ಬಂದ ಆರು ಕಾಡಾನೆಗಳು, ಹುಣಸೇಕಟ್ಟೆ ಸಾಮಾಜಿಕ ಅರಣ್ಯದಲ್ಲಿ ಬೀಡು ಬಿಟ್ಟಿವೆ. ಇದರಿಂದ ಸುತ್ತಮುತ್ತಲಿನ ರೈತರು ಆತಂಕಕ್ಕೀಡಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಅರಣ್ಯಕ್ಕೆ ಓಡಿಸಲು ಹರಸಹಾಸ ಪಡುವಂತಾಗಿದೆ.‌

ಹನಗೋಡು ಹೋಬಳಿಯ ಕಾಳೇನಹಳ್ಳಿಯ ಜಮೀನಿನಲ್ಲಿ ಕಳೆದ ಗುರುವಾರ ಆರು ಕಾಡಾನೆಗಳು ಬೀಡು ಬಿಟ್ಟಿದ್ದನ್ನು ಕಂಡ ಗ್ರಾಮಸ್ಥರು ಕಾಡಾನೆಗಳನ್ನು ಸುತ್ತುವರೆದು ಕೇಕೆ, ಶಿಳ್ಳೆ ಹಾಕಿ, ಕೂಗಾಡುವ ಮೂಲಕ ಕಾಡಿಗಟ್ಟಲು ಪ್ರಯತ್ನಿಸಿದರಾದರೂ ಆನೆಗಳು ಬೆದರದೆ ಜಮೀನಿನಲ್ಲಿಯೇ ಠಿಕಾಣಿ ಹೂಡಿದ್ದು, ಸ್ಥಳದಿಂದ ಕದಲಲಿಲ್ಲ. ಕಲ್ಲೇಟಿಗೂ ಹೆದರದೇ ಅಲ್ಲಿಯೇ ಗಿರಕಿಹೊಡೆದು, ಬೆಳಗ್ಗೆ ಎಂಟು ಗಂಟೆಯವರೆಗೆ ಅಲ್ಲೇ ಠಿಕಾಣಿ ಹೂಡಿದ್ದವು.

ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಕಾಳೇನಹಳ್ಳಿ ಜಮೀನು ಬಳಿಗೆ ಧಾವಿಸಿ ಕಾಡಿಗಟ್ಟಲು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ನೂರಾರು ಮಂದಿ ಸೇರಿ ಕೂಗಾಟ ನಡೆಸಿದ ಪರಿಣಾಮ ಕಾರ್ಯಾಚರಣೆಗೂ ಅಡಚಣೆಯಾಯಿತು. ಕೊನೆಗೆ ಪೊಲೀಸರು ಜನ ಸಮೂಹವನ್ನು ನಿಯಂತ್ರಿಸಿ, ಅರಣ್ಯ ಇಲಾಖೆಯವರು ಹತ್ತಾರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಪಟಾಕಿ ಸಿಡಿಸಿದ ಪರಿಣಾಮ ೨ ಕಿ.ಮೀ.ದೂರದ ಕಾಡಿನ ಕಡೆಗೆ ಆನೆಗಳು ಮುಖ ಮಾಡಿದವು. ಹೆಚ್ಚು ಜನಜಂಗುಳಿ ಕೂಡಿದ್ದರಿಂದ ಗಾಬರಿಗೊಂಡ ಕಾಡಾನೆಗಳು ಗುರುಪುರ ಬಳಿಯ ಹುಣಸೇಕಟ್ಟೆ ಅರಣ್ಯ ಪ್ರದೇಶದೊಳಗೆ ಸೇರಿಕೊಂಡವು.

ಮುಖ್ಯ ರಸ್ತೆಯ ಸುತ್ತಲೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಾವಲು ಹಾಕಿ ಸಾರ್ವಜನಿಕರಿಗೆ ಕಾಡಾನೆಗಳು‌ ಇರುವಿಕೆಯ ಮಾಹಿತಿ ನೀಡಲಾಗುತ್ತಿದ್ದು, ಇಂದು ಸಂಜೆ ಹುಣಸೇಕಟ್ಟೆ ಅರಣ್ಯ ಪ್ರದೇಶದಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಆನೆಗಳ ಹಿಂಡನ್ನು ಕಾರ್ಯಾಚರಣೆ ನಡೆಸಿ ಕಾಡಿಗಟ್ಟಲಾಗುವುದೆಂದು ವೀರನಹೊಸಳ್ಳಿ ಆರ್​ಎಫ್​ಓ ನಮನ ನಾರಾಯಣ ನಾಯಕ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.