ಮೈಸೂರು: ಜುಬಿಲಂಟ್ ಕಂಪನಿ ನೌಕರರಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗಿ ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಮೈಸೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ಹೇಳಿದ್ದು ಹೀಗೆ...
ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಜುಬಿಲಂಟ್ ಜನರಿಕ್ ಫಾರ್ಮಸಿಟಿಕಲ್ ಕಂಪನಿ ನೌಕರರಲ್ಲಿ ದಿನೇ ದಿನೆ ಸೋಂಕಿತರು ಹೆಚ್ಚುತ್ತಲೇ ಇದ್ದಾರೆ. ಕಂಪನಿ ತನಿಖೆಗೆ ದಾಖಲಾತಿ ಕೇಳಿದಾಗ ತಡ ಮಾಡಿತ್ತು. ಆದ್ದರಿಂದ ಅವರಿಗೆ ಲೀಗಲ್ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದರು.
ಕಂಪನಿಗೆ ಬಂದು ಹೋದವರು, ಅದರಲ್ಲಿ ಆಸ್ಟ್ರೇಲಿಯಾ, ಗೋವಾದಿಂದ ಬಂದವರು ಯಾರು ಎಂಬ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದೇವೆ. ಕಂಪನಿಗೆ ಬೇರೆ ಕಡೆಯಿಂದ ಆಡಿಟ್ ಮಾಡಲು ಬಂದವರು ಯಾರು ಎಂದೂ ತನಿಖೆ ನಡೆಸುತ್ತಿದ್ದೇವೆ. ಈ ದೃಷ್ಟಿಯಿಂದ ಕಂಪನಿ ನೌಕರರ ರಿಜಿಸ್ಟರ್ ಹಾಗೂ ಕಂಪನಿ ಒಳಗೆ ಮತ್ತು ಹೊರಗಿರುವ ಸಿಸಿಟಿವಿ ಕ್ಯಾಮರಾಗಳನ್ನು ಪಡೆದು ತನಿಖೆ ಮುಂದುವರೆಸಿದ್ದೇವೆ ಎಂದು ವಿವರಿಸಿದರು.
ಕಂಪನಿಯ ಮೊದಲ ಸೋಂಕಿತ ವ್ಯಕ್ತಿ (ರೋಗಿ 52) ಪ್ರಯಾಣಿಸಿದ್ದ ಮತ್ತು ಆತನ ಸಂಪರ್ಕದಲ್ಲಿದ್ದವರ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಮುಖ್ಯವಾಗಿ ಚೀನಾದಿಂದ ಕಂಟೈನರ್ನಲ್ಲಿ ಬಂದ ಕಚ್ಚಾ ವಸ್ತುಗಳ ಮಾದರಿಯನ್ನು ಪುಣೆಯ ಎನ್ಐವಿ ಲ್ಯಾಬ್ಗೆ ಕಳುಹಿಸಲಾಗಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದರು.