ಮೈಸೂರು: ರಾಜ್ಯ ಉಚ್ಚ ನ್ಯಾಯಾಲಯವು ಮೇಯರ್ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವ ರದ್ದು ಮಾಡುವಂತೆ ತೀರ್ಪು ನೀಡಿರುವುದು, ಮೂರು ವರ್ಷ ಹೋರಾಟಕ್ಕೆ ಸಿಕ್ಕಿದ ಫಲ ಎಂದು ಪರಾಜಿತ ಅಭ್ಯರ್ಥಿ ರಜನಿ ಅಣ್ಣಯ್ಯ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2018ರಲ್ಲಿ ಪಾಲಿಕೆ ಚುನಾವಣಾ ಸ್ಪರ್ಧಿಸಿ ಸೋತಾಗ, ರುಕ್ಮಿಣಿ ಮಾದೇಗೌಡ ಅವರ ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸಂಬಂಧಿಗಳು ನನಗೆ ತಿಳಿಸಿದಾಗ, ನ್ಯಾಯಾಲಯದ ಮೊರೆ ಹೋಗಿ ಮೂರು ವರ್ಷಗಳ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದಿದ್ದಾರೆ.
ಹೈ ಕೋರ್ಟ್ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ. ಚುನಾವಣೆ ನಡೆದರೂ ಗೆಲ್ತೇನೆ ಎಂಬ ವಿಶ್ವಾಸವಿದೆ. ಚುನಾವಣೆಯಲ್ಲಿ ತಪ್ಪು ಮಾಹಿತಿ ನೀಡಿದರೆ ಕಾನೂನು ತಕ್ಕ ಪಾಠ ಕಲಿಸಿದೆ ಎಂಬುವುದು ಎಲ್ಲರಿಗೂ ಗೊತ್ತಾಗಬೇಕು ಎಂದು ತಿಳಿಸಿದರು.
ರಜಿನಿ ಪತಿ ಅಣ್ಣಯ್ಯ ಮಾತನಾಡಿ, ಹೈಕೋರ್ಟ್ ನಲ್ಲಿ ನ್ಯಾಯ ಸಿಕ್ಕಿದೆ. ರುಕ್ಮಿಣಿ ಮಾದೇಗೌಡ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ನಾವು ವಕೀಲರ ಜೊತೆ ಹೋಗಿ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.