ಮೈಸೂರು: ಸಿದ್ದರಾಮಯ್ಯ ವಿರುದ್ಧ ಮಾತನಾಡಲು ವಿಶ್ವನಾಥ್‌ಗೆ ಏನು ಅಧಿಕಾರವಿದೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೋಷನ್ ಬೇಗ್ ಯಾವ ಉದ್ದೇಶ ಇಟ್ಟುಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಬೇಗ್ ಮನಸ್ಸಿನಲ್ಲಿ ಏನಿಗೆ ಎಂಬುದರ ಕುರಿತು ಅವರನ್ನೇ ಕೇಳಬೇಕು. ರಾಜಕೀಯದಲ್ಲಿ ಯಾವಾಗ ಬೇಕಾದರೂ, ಏನೂ ಬೇಕಾದರೂ ಆಗಬಹುದು. ಸಿದ್ದರಾಮಯ್ಯ ಅವರನ್ನು ಹೊಣೆ ಮಾಡಲು ವಿಶ್ವನಾಥ್ ಅವರಿಗೆ ಏನು ಅಧಿಕಾರವಿದೆ? ಕಳ್ಳರ ಮನಸ್ಸು ಹುಳ್ಳುಳ್ಳಗೆ ಎನ್ನುವ ಹಾಗೆ ಅವರು ಏಕೆ ಮಾತನಾಡಿದರು ಎಂದು ಮಹದೇವಪ್ಪ ಅಸಮಾಧಾನ ತೋರಿಸಿದರು.