ETV Bharat / city

ಮಕ್ಕಳ ಮೇಲೆ ಕೋವ್ಯಾಕ್ಸಿನ್​​​​ ಲಸಿಕೆ ಪ್ರಯೋಗ: ಮೈಸೂರಿನ ಚೆಲುವಾಂಬ ಆಸ್ಪತ್ರೆ ಆಯ್ಕೆ - ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ.ನಂಜರಾಜು

ಮಕ್ಕಳ ಮೇಲೆ ಕೋವಿಡ್​ ಲಸಿಕೆ ಪ್ರಯೋಗ ಮಾಡಲು ದೇಶದ 10 ಆಸ್ಪತ್ರೆಗಳು ಆಯ್ಕೆಯಾಗಿದ್ದು, ಇದರಲ್ಲಿ ಮೈಸೂರಿನ ಸರ್ಕಾರಿ ಚೆಲುವಾಂಬ ಆಸ್ಪತ್ರೆ ಒಂದಾಗಿದೆ. ಈ ಪ್ರಾಯೋಗಿಕ ಕ್ಲಿನಿಕಲ್ ಟೆಸ್ಟ್​​ಗಾಗಿ ಆಸ್ಪತ್ರೆಯಲ್ಲಿನ ಸಿದ್ಧತೆ ಬಗ್ಗೆ ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ. ನಂಜರಾಜು ಮಾಹಿತಿ ನೀಡಿದ್ದಾರೆ.

cheluwamba-childrens-hospital-in-mysore
ಮೈಸೂರಿನ ಚೆಲುವಾಂಬ ಮಕ್ಕಳ ಆಸ್ಪತ್ರೆ ಆಯ್ಕೆ
author img

By

Published : May 28, 2021, 4:04 PM IST

ಮೈಸೂರು: ಭಾರತ್ ಬಯೋಟೆಕ್​ನಿಂದ ಮಕ್ಕಳ ಮೇಲೆ‌ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ದೇಶದ 10 ಸಂಸ್ಥೆಗಳು ಆಯ್ಕೆಯಾಗಿದ್ದು, ಅದರಲ್ಲಿ ಮೈಸೂರಿನ ಚೆಲುವಾಂಬ ಸರ್ಕಾರಿ ಮಕ್ಕಳ‌ ಆಸ್ಪತ್ರೆ ಆಯ್ಕೆಯಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ನಂಜರಾಜು ವಿವರಿಸಿದರು.

ಮೈಸೂರಿನ ಚೆಲುವಾಂಬ ಮಕ್ಕಳ ಆಸ್ಪತ್ರೆ ಆಯ್ಕೆ

ಓದಿ: ಕೋವಾಕ್ಸಿನ್‌ನ ಶಿಶುವೈದ್ಯಕೀಯ ಪ್ರಯೋಗಗಳು ಜೂನ್‌ನಿಂದ ಪ್ರಾರಂಭ ಸಾಧ್ಯತೆ

ಕೊರೊನಾದ 3ನೇ ಅಲೆ ಮಕ್ಕಳ‌ ಮೇಲೆ ಪರಿಣಾಮ‌ ಬೀರಲಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ‌ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಲಸಿಕೆ ಪರಿಣಾಮ ಬೀರಲಿದೆಯೇ ಎಂಬುದನ್ನು ತಿಳಿಯಲು ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸುತ್ತಿದೆ. ಇದನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲು ದೇಶದ 10 ಆಸ್ಪತ್ರೆಗಳು ಆಯ್ಕೆಯಾಗಿದ್ದು, ಇದರಲ್ಲಿ ಮೈಸೂರಿನ ಸರ್ಕಾರಿ ಚೆಲುವಾಂಬ ಆಸ್ಪತ್ರೆ ಒಂದಾಗಿದೆ. ಈ ಪ್ರಾಯೋಗಿಕ ಕ್ಲಿನಿಕಲ್ ಟೆಸ್ಟ್​​ಗಾಗಿ ಆಸ್ಪತ್ರೆಯಲ್ಲಿನ ಸಿದ್ಧತೆ ಬಗ್ಗೆ ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ. ನಂಜರಾಜು ಮಾಹಿತಿ ನೀಡಿದ್ದಾರೆ.

ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗ ಚೆಲುವಾಂಬ ‌ಆಸ್ಪತ್ರೆಯ ಪಿಡಿಯಾಟ್ರೀಕ್ ಡಿಪಾರ್ಟ್ಮೆಂಟ್​​ನಿಂದ ಮಾಡಲಾಗುತ್ತಿದ್ದು, ಮೊದಲು 5 ಸೆಂಟರ್​ಗಳಲ್ಲಿ 54 ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಲು ತಿಳಿಸಲಾಗಿತ್ತು. ಆದರೆ ಈಗ 10 ಸೆಂಟರ್​​​ಗಳಲ್ಲಿ ಎಷ್ಟು ಮಕ್ಕಳ ಮೇಲೆ ಮಾಡಲಾಗುತ್ತಿದೆ ಎಂಬುದು ಗೊತ್ತಿಲ್ಲ.

ಆದರೆ 3 ವರ್ಗದ ಮಕ್ಕಳ ಮೇಲೆ ಈ ಲಸಿಕೆ ಪ್ರಯೋಗ ಮಾಡಲಾಗುತ್ತಿದ್ದು, ಮೊದಲ ಹಂತ 12ರಿಂದ 18 ವರ್ಷದ ಮಕ್ಕಳು, 2ನೇ ಹಂತದಲ್ಲಿ 6ರಿಂದ 12 ವರ್ಷದ ಮಕ್ಕಳು ಹಾಗೂ 3ನೇ ವರ್ಗ 2ರಿಂದ 6 ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಲು ಬೇಕಾದ ತಂತ್ರಜ್ಞಾನ ಹಾಗೂ ಲ್ಯಾಬ್ ಸಿದ್ಧಪಡಿಸಲಾಗುತ್ತಿದೆ. ಯಾವಾಗ ಎಂಬುದು ದಿನಾಂಕ ನಿಗದಿಯಾಗಿಲ್ಲ ಎಂದು ಡಾ. ನಂಜರಾಜು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.