ETV Bharat / city

ತಿಮಿಂಗಿಲ ವಾಂತಿ ಮಾರಾಟ ಯತ್ನ: ಇಬ್ಬರ ಬಂಧನ - ಮೈಸೂರು ಅಪರಾಧ ಸುದ್ದಿ

ಮೈಸೂರಿನ ವಿನೋಬಾ ರಸ್ತೆಯಲ್ಲಿ ಅಂಬರ್​ಗ್ರಿಸ್ ಮಾರಾಟ ಮಾಡಲು ಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದು, ಸುಮಾರು 2 ಕೋಟಿ ಮೌಲ್ಯದ ಅಂಬರ್​ಗ್ರಿಸ್ ಅನ್ನು ವಶಕ್ಕೆ ಪಡೆದಿದ್ದಾರೆ.

Trying to sell ambergris: Two arrested in Mysore
ತಿಮಿಂಗಿಲ ವಾಂತಿ ಮಾರಾಟ ಯತ್ನ: ಇಬ್ಬರ ಬಂಧನ
author img

By

Published : Aug 14, 2021, 11:11 PM IST

ಮೈಸೂರು: ಅಂಬರ್​​ಗ್ರಿಸ್​​ (ತಿಮಿಂಗಲ ವಾಂತಿ) ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನ ಮೈಸೂರು ಪೊಲೀಸರು ಬಂಧಿಸಿದ್ದು, 2.2 ಕೆಜಿಯಷ್ಟು ಅಂಬರ್​ಗ್ರಿಸ್​ ಅನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರಿನ ರಾಜೀವ್ ನಗರದ ಸಮೀವುಲ್ಲಾ(44), ಶ್ರೀರಂಗಪಟ್ಟಣದ ಗಂಜಾಂನ ರಾಘವೇಂದ್ರ (40) ಬಂಧಿತ ಆರೋಪಿಗಳಾಗಿದ್ದಾರೆ. ಈ ಇಬ್ಬರೂ ಆರೋಪಿಗಳು ಮೈಸೂರಿನ ವಿನೋಬಾ ರಸ್ತೆಯಲ್ಲಿ ಬೆಲೆ ಬಾಳುವ ವಸ್ತುವೊಂದನ್ನು ಮಾರಾಟ ಮಾಡುವುದಾಗಿ ಮಾತನಾಡಿಕೊಳ್ಳುತ್ತಿದ್ದು, ಇದನ್ನು ಗಮನಿಸಿದ ಸಣ್ಣಯ್ಯ ಎಂಬಾತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಇನ್ನಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಬ್ಯಾಗ್​ನಲ್ಲಿ ಇದ್ದ ವಸ್ತುವನ್ನು ಪರಿಶೀಲಿಸಿದಾಗ ಅದರಲ್ಲಿ ಅಂಬರ್​ಗ್ರಿಸ್ ಇರುವುದು ಪತ್ತೆಯಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಂಬರ್​​ಗ್ರಿಸ್​ ಅನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ ಶುಭಾಶಯ ಕೋರಿ,ದೇಶದ ಜನರಿಗೆ ಎಚ್ಚರಿಕೆ ನೀಡಿದ ರಾಷ್ಟ್ರಪತಿ... ಪ್ರಮುಖ ಹೈಲೈಟ್ಸ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.