ETV Bharat / city

ನಾಗರಹೊಳೆಯಲ್ಲಿ ಹುಲಿ ಗಣತಿ ಆರಂಭ: ಕೊರೊನಾದಿಂದ ಸ್ವಯಂಸೇವಕರಿಗಿಲ್ಲ ಅವಕಾಶ!

2018ರ ಅಲ್ ಇಂಡಿಯಾ ಟೈಗರ್ ಸಮೀಕ್ಷೆ ಪ್ರಕಾರ, ನಾಗರಹೊಳೆ ಅರಣ್ಯದಲ್ಲಿ 125 ಹುಲಿಗಳು ವಾಸವಿದ್ದು ನಾಗರಹೊಳೆ ಅರಣ್ಯದಲ್ಲಿ ಪ್ರತಿ 100 ಚದರ ಕಿ.ಮೀ.ಗೆ 12 ಹುಲಿಗಳು ವಾಸಿಸುತ್ತಿವೆ. ದೇಶದಲ್ಲೇ 3ನೇ ಸ್ಥಾನ ಪಡೆದುಕೊಂಡು, ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

tiger census
ಹುಲಿ ಗಣತಿ
author img

By

Published : Jun 19, 2021, 7:14 AM IST

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯದಲ್ಲಿ ಎರಡನೇ ಹಂತದ ಹುಲಿ ಗಣತಿ ಆರಂಭಗೊಂಡಿದ್ದು, ಕೊರೊನಾ ಆರ್ಭಟದಿಂದ ಸ್ವಯಂ ಸೇವಕರನ್ನ ಗಣತಿ ಕಾರ್ಯದಿಂದ ದೂರ ಇಡಲಾಗಿದೆ.

ನಾಗರಹೊಳೆಯಲ್ಲಿ ಹುಲಿ ಗಣತಿ ಆರಂಭ

840 ಚದರ ಕಿ.ಮೀ. ವ್ಯಾಪ್ತಿಯ ನಾಗರಹೊಳೆ ಅರಣ್ಯದಲ್ಲಿ ಎರಡು ಹಂತದಲ್ಲಿ ಹುಲಿ ಗಣತಿ ನಡೆದಿದ್ದು, ಪ್ರಥಮ ಹಂತದ ಗಣತಿ ಮೇನಲ್ಲಿ ಆರಂಭವಾಗಿ ಮುಕ್ತಾಯಗೊಂಡಿದೆ. ಎರಡನೇ ಹಂತದ ಗಣತಿ ಜೂನ್ ಮೊದಲ ವಾರದಲ್ಲಿ ಆರಂಭವಾಗಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನದ 8 ವಲಯವನ್ನು ಎರಡು ಬ್ಲಾಕ್‌ಗಳಾಗಿ ವಿಂಗಡಿಸಿ, ಬ್ಲಾಕ್ ಒಂದರಲ್ಲಿ ಹುಣಸೂರು, ಆನೆಚೌಕೂರು, ವೀರನಹೊಸಹಳ್ಳಿ, ಮೇಟಿಕುಪ್ಪೆ ವಲಯಗಳಿದ್ದು, ಬ್ಲಾಕ್ ಎರಡರಲ್ಲಿ ನಾಗರಹೊಳೆ, ಕಲ್ಲಹಳ್ಳ, ಡಿ.ಬಿ.ಕುಪ್ಪೆ, ಅಂತರಸಂತೆ ವಲಯಗಳಿವೆ.

ಹುಲಿ ಗಣತಿ ಕಾರ್ಯದಲ್ಲಿ 450 ಸ್ವಯಂಚಾಲಿತ ಕ್ಯಾಮೆರಾ ಬಳಸಿ ಒಂದು ತಿಂಗಳ ಗಣತಿ ನಡೆಯಲಿದ್ದು, ಕ್ಯಾಮೆರಾ ಡೇಟಾ ಆಧರಿಸಿ ಗಣತಿ ತಜ್ಞರು ಸ್ಟಾಟಿಸ್ಟಿಕಲ್ ನಿಯಮಾನುಸಾರ ಹುಲಿ ವಯಸ್ಸು, ಲಿಂಗ ಪತ್ತೆ ಮಾಡಲಿದ್ದಾರೆ.

ರಾಷ್ಟ್ರೀಯ ಸಮೀಕ್ಷೆ:

ನಾಲ್ಕು ವರ್ಷಕ್ಕೆ ರಾಷ್ಟ್ರೀಯ ಯೋಜನಾ ನಿಯಮಾನುಸಾರ ನಡೆಯಲಿರುವ ಗಣತಿ ಕಾರ್ಯಕ್ಕೆ ವಾರ್ಷಿಕ ಗಣತಿ ಸಮೀಕ್ಷೆ ವರದಿ ಪೂರಕವಾಗಲಿದೆ. 2021ರಲ್ಲಿ ನಡೆಯುತ್ತಿರುವ ಗಣತಿ ರಾಷ್ಟ್ರೀಯ ಮಟ್ಟದಲ್ಲಿ 2022ರಲ್ಲಿ ನಡೆಯಲಿರುವ 5ನೇ ರಾಷ್ಟ್ರೀಯ ಹುಲಿ ಗಣತಿ ಯೋಜನೆಗೆ ಪೂರಕವಾಗಲಿದೆ.

ಹುಲಿ ಗಣತಿ ಕಾರ್ಯಕ್ಕೆ ಸ್ವಯಂಸೇವಕರ ನೆರವು ಪಡೆದು ಅರಣ್ಯದಲ್ಲಿ ಗಣತಿ ನಡೆಸುವ ವಾಡಿಕೆ ಇತ್ತು. ಕೊರೊನಾದಿಂದಾಗಿ ಸ್ವಯಂಸೇವಕರ ಸಂಘದ ಸಹಾಯವಿಲ್ಲದೆ ಅರಣ್ಯ ಇಲಾಖೆಗೆ ಸೇರಿದ 130 ಸಿಬ್ಬಂದಿ ಹುಲಿ ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ. ಹುಲಿ- ಬಲಿ ಪ್ರಾಣಿಗಳ ಲೆಕ್ಕಾಚಾರ 2020ರಲ್ಲಿ ನಡೆದ ಗಣತಿ ಅನ್ವಯ ನಾಗರಹೊಳೆ ಅರಣ್ಯದಲ್ಲಿ ಪ್ರತಿ 100 ಚದರ ಕಿ.ಮೀ.ಗೆ 12 ಹುಲಿಗಳು ವಾಸಿಸುತ್ತಿವೆ. ನಾಗರಹೊಳೆ ಅರಣ್ಯದಲ್ಲಿ 125 ಹುಲಿ ವಾಸವಿದ್ದು, ಹುಲಿ ಅಭಿವೃದ್ಧಿಗೆ ಪೂರಕವಾದ ಅರಣ್ಯ ಮತ್ತು ಆಹಾರ ಸರಪಳಿ ಉತ್ತಮವಾಗಿದೆ. ಪ್ರತಿ ಚದರ ಕಿ.ಮೀ.ಗೆ 24 ಚುಕ್ಕಿ ಚಿಂಕೆ, 5 ಸಾಂಬರ್, 2 ಕಾಡುಕುರಿ, 5 ಕಡವೆ, 4 ಕಾಡುಹಂದಿ ವಾಸವಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮಹೇಶ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, 840 ಚದರ ಕಿ.ಮೀ. ವ್ಯಾಪ್ತಿಯ ನಾಗರಹೊಳೆ ಅರಣ್ಯದಲ್ಲಿ ಎರಡು ಹಂತದಲ್ಲಿ ಹುಲಿ ಗಣತಿ ನಡೆದಿದ್ದು, ಪ್ರಥಮ ಹಂತದ ಗಣತಿ ಮೇನಲ್ಲಿ ಆರಂಭವಾಗಿ ಮುಕ್ತಾಯಗೊಂಡಿದೆ. ಎರಡನೇ ಹಂತದ ಗಣತಿ ಜೂನ್ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಲಿದೆ. ಕೋವಿಡ್ ಸಂದರ್ಭದಲ್ಲಿ ಹುಲಿ ಗಣತಿ ಕಾರ್ಯಕ್ಕೆ ಸ್ವಯಂಸೇವಕರ ನೆರವು ಪಡೆದು ಅರಣ್ಯದಲ್ಲಿ ಗಣತಿ ನಡೆಸುವ ವಾಡಿಕೆ ಇತ್ತು. ಕೋವಿಡ್​ನಿಂದಾಗಿ ಸ್ವಯಂಸೇವಾ ಸಂಘದ ಸಹಾಯವಿಲ್ಲದೆ ಅರಣ್ಯ ಇಲಾಖೆಗೆ ಸಿಬ್ಬಂದಿ ಹುಲಿ ಗಣತಿ ಕಾರ್ಯದಲ್ಲಿ ತೊಡಗಿಸಲಾಗಿದೆ ಎಂದರು.

2018ರ ಅಲ್ ಇಂಡಿಯಾ ಟೈಗರ್ ಸಮೀಕ್ಷೆ ಪ್ರಕಾರ, ನಾಗರಹೊಳೆ ಅರಣ್ಯದಲ್ಲಿ 125 ಹುಲಿಗಳು ವಾಸವಿದ್ದು, ನಾಗರಹೊಳೆ ಅರಣ್ಯದಲ್ಲಿ ಪ್ರತಿ 100 ಚದರ ಕಿ.ಮೀ.ಗೆ 12 ಹುಲಿಗಳು ವಾಸಿಸುತ್ತಿವೆ. ದೇಶದಲ್ಲೇ 3ನೇ ಸ್ಥಾನ ಪಡೆದುಕೊಂಡು, ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಹತ್ತು ವರ್ಷಗಳ ಸಮೀಕ್ಷೆ ಪ್ರಕಾರ ಹುಲಿಗಳ ಬೆಳವಣಿಗೆ ಶೇ. 50ರಷ್ಟು ಹೆಚ್ಚಾಗಿದೆ. ಸಸ್ಯಾಹಾರಿ ಪ್ರಾಣಿಗಳು ಹೆಚ್ಚು ಇದ್ದಷ್ಟು ಹುಲಿಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದಿದೆ.

ನಾಗರಹೊಳೆ ಅಂತರಸಂತೆ ವನ್ಯಜೀವಿ ವಲಯ ಅರಣ್ಯಾಧಿಕಾರಿ‌ ಸಿದ್ದರಾಜು ಮಾತನಾಡಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನದ 8 ವಲಯವನ್ನು ಎರಡು ಬ್ಲಾಕ್‌ಗಳಾಗಿ ವಿಂಗಡಿಸಿ, ಬ್ಲಾಕ್ ಒಂದರಲ್ಲಿ ಹುಣಸೂರು, ಆನೆಚೌಕೂರು, ವೀರನಹೊಸಹಳ್ಳಿ, ಮೇಟಿಕುಪ್ಪೆ ವಲಯಗಳಿದ್ದು, ಬ್ಲಾಕ್ ಎರಡರಲ್ಲಿ ನಾಗರಹೊಳೆ, ಕಲ್ಲಹಳ್ಳ, ಡಿ.ಬಿ.ಕುಪ್ಪೆ, ಅಂತರಸಂತೆ ವಲಯವಿದೆ. ಕ್ಯಾಮೆರಾ ಮೂಲಕ ಹುಲಿ ಗಣತಿ ಮಾಡಲಾಗುವುದು. ಈ ಎಲ್ಲ ಹುಲಿಯ ಮಾಹಿತಿಯನ್ನು ದೆಹಲಿಗೆ ಕಳಿಸಲಾಗುವುದು ಎಂದರು.

ಇದನ್ನೂ ಓದಿ: ಪರೀಕ್ಷೆಗೆ ಮುನ್ನವೇ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಪಾಸ್​... ಸರ್ಕಾರ ಹೊರಡಿಸಿರುವ ಗೈಡ್​ಲೈನ್​ನಲ್ಲಿ ಏನೇನಿದೆ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.