ಮೈಸೂರು : ಕೊರೊನಾ ಸಂದರ್ಭದಲ್ಲಿ ಮಠ-ಮಂದಿರಗಳ ಸೇವೆಯಿಂದ ಸರ್ಕಾರಗಳಿಗೆ ಆನೆಬಲ ಬಂದಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅಭಿಪ್ರಾಯಪಟ್ಟರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ, ಕೋವಿಡ್‌ಗಾಗಿ ಸುತ್ತೂರು ಮಠ ತೊಡಗಿಸಿಕೊಂಡಿರುವ ಕಾರ್ಯವೈಖರಿಗಳ ಮಾಹಿತಿ ಪಡೆದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಠ-ಮಂದಿರದ ಸಮಾಜಮುಖಿ ಸೇವೆಯಿಂದ, ಸಮಾಜದಲ್ಲಿ ಆತ್ಮಸ್ಥೈರ್ಯ ಮೂಡಿದೆ.
ಸುತ್ತೂರು ಮಠವು ಮೈಸೂರು, ಚಾಮರಾಜನಗರ, ಊಟಿ ಹಾಗೂ ಸಕಲೇಶಪುರಗಳಲ್ಲಿ ಕೋವಿಡ್ ಸೇವೆ ಮಾಡುತ್ತಿದೆ. ಸಮಾಜಮುಖಿ ಚಟುವಟಿಕೆಗಳ ಉತ್ತಮ ಸೇವೆ ಮಾಡುತ್ತಿದೆ ಎಂದು ಶ್ಲಾಘಿಸಿದರು.