ಮೈಸೂರು: ದೇವಾಲಯದ ಶಿವ ಲಿಂಗದ ಮೇಲೆ ನಾಗರ ಹಾವೊಂದು ಬಂದು ಮಲಗಿದ್ದು, ಇದನ್ನು ನೋಡಿದ ಭಕ್ತರು ಅಚ್ಚರಿಗೊಂಡ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದಿದೆ.
ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಮಲ್ಲಪ್ಪ ದೇವಾಲಯದಲ್ಲಿ ಪೂಜೆ ಮಾಡಲು ಬಂದ ಪೂಜಾರಿ ಇದನ್ನು ನೋಡಿ ತಕ್ಷಣ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ದೇವಾಲಯಕ್ಕೆ ಆಗಮಿಸಿದ ಗ್ರಾಮಸ್ಥರು ಶಿವಲಿಂಗದ ಮೇಲಿರುವ ನಗರ ಹಾವನ್ನು ಕಂಡು ಭಕ್ತಿಯಿಂದ ಪೂಜೆ ಸಲ್ಲಿಸಿದರು. ಹಾವು ಲಿಂಗದ ಮೇಲೆ ಇದ್ದ ಹಿನ್ನೆಲೆಯಲ್ಲಿ ದೇವಾಲಯದ ಬಾಗಿಲನ್ನು ಹಾಕಲಾಗಿದೆ.