ETV Bharat / city

'ಕಾಂಗ್ರೆಸ್​ ಬಿಟ್ಟು ಜೆಡಿಎಸ್​ಗೆ ಹೋಗಲ್ಲ': ಮಾಜಿ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಸ್ಪಷ್ಟನೆ

ಕಾಂಗ್ರೆಸ್​ ಬಿಟ್ಟು ಜೆಡಿಎಸ್​ ಸೇರುವ ಸುದ್ದಿ ಬರೀ ಊಹಾಪೋಹ ಎಂದು ಮಾಜಿ ಸಚಿವ ಡಾ.ಎಚ್​.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್​ ಬೋಸ್​ ಹೇಳಿದ್ದಾರೆ.

sunil-bose
ಸುನೀಲ್ ಬೋಸ್
author img

By

Published : Apr 27, 2022, 6:11 PM IST

ಮೈಸೂರು: ಕಾಂಗ್ರೆಸ್​ನಲ್ಲಿ ನಮಗೆ ಉತ್ತಮ ಗೌರವವಿದೆ. ಯಾವುದೇ ಕಾರಣಕ್ಕೂ ನಾವು ಜೆಡಿಎಸ್​ ಪಕ್ಷ ಸೇರಲ್ಲ. ಅದರ ಅವಶ್ಯಕತೆಯೂ ಇಲ್ಲ. ನಮ್ಮ ತಂದೆ ಮತ್ತು ನಾನು ಕಾಂಗ್ರೆಸ್​ ತೊರೆಯುತ್ತೇವೆ ಎಂಬುದು ಶುದ್ಧ ಸುಳ್ಳು ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಸ್ಪಷ್ಟನೆ ನೀಡಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಏಳಿಗೆಯನ್ನ ಸಹಿಸದವರು ಈ ರೀತಿಯಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಎರಡೂ ಒಂದೇ. ಮುಸ್ಲಿಮರು ಜೆಡಿಎಸ್​ಗೆ ಮತ ನೀಡುವುದು ಒಂದೇ, ಬಿಜೆಪಿಗೆ ಮತ ಹಾಕುವುದು ಒಂದೇ. ನಾವು ಜೆಡಿಎಸ್​ಗೆ ಹೋಗುವ ಅವಶ್ಯಕತೆ ಇಲ್ಲ. ಮಹದೇವಪ್ಪ, ಸುನಿಲ್ ಬೋಸ್ ಜೆಡಿಎಸ್ ಸೇರ್ತಾರೆ ಎಂಬುದು ಉಹಾಪೋಹ ಎಂದರು.

ವಿಧಾನಪರಿಷತ್​ ಮಾಜಿ ಸದಸ್ಯ ಸಿಎಂ ಇಬ್ರಾಹಿಂ ಅವರು ಜೆಡಿಎಸ್​ಗೆ ಹೋದ ತಕ್ಷಣ ಅಲ್ಪಸಂಖ್ಯಾತರು ಜೆಡಿಎಸ್​ಗೆ ಮತ ಹಾಕಲ್ಲ. ಮುಸ್ಲಿಂ ಸಮುದಾಯದ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಅಕ್ರಮ: ಡಿವೈಸ್ ಬಳಕೆಗೆ ಎಕ್ಸ್‌ಪರ್ಟ್ ಟೀಂ ನಿಯೋಜಿಸುತ್ತಿದ್ದ ಕಿಂಗ್​​ಪಿನ್​​

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.