ಮೈಸೂರು: ಕೊರೊನಾ ಪರಿಣಾಮದಿಂದಾಗಿ ಅಪ್ಪನ ಕಷ್ಟಕ್ಕೆ ಮರುಗಿದ ಇಲ್ಲೊಬ್ಬ ಬಾಲಕ ಸಣ್ಣ ವಯಸ್ಸಿನಲ್ಲಿಯೇ ಚಮ್ಮಾರ ವೃತ್ತಿಗಿಳಿದಿದ್ದಾನೆ. ಈ ಮೂಲಕ ಬದುಕಿನ ಬಂಡಿ ಸಾಗಿಸಲು ಕುಟುಂಬಕ್ಕೆ ನೆರವಾಗುತ್ತಿದ್ದಾನೆ.
ಮೈಸೂರಿನ ಟಿ.ಕೆ.ಲೇಔಟ್‌ನಲ್ಲಿರುವ ತಂಗ ಹಾಗೂ ಶೋಭಾ ದಂಪತಿಯ 12 ವರ್ಷದ ಪುತ್ರ ರಾಹುಲ್ ಅಪ್ಪನ ಜೊತೆ ಸೇರಿ ಚಮ್ಮಾರಿಕೆಯಲ್ಲಿ ತೊಡಗಿದ್ದಾನೆ.
ಕೊರೊನಾ ಕಾರಣ ಶಾಲೆಗಳು ಇನ್ನೂ ತೆರೆದಿಲ್ಲ. ಹಾಗಂತ ಆಟೋಟಕ್ಕೂ ತೆರಳೋಕೆ ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದೆ. ಹೀಗಾಗಿ ತಂದೆಯ ಜೊತೆ ರಸ್ತೆ ಬದಿ ಪಾದರಕ್ಷೆ ಹೊಲಿಯುತ್ತಿದ್ದಾನೆ. ಮನೆಯಲ್ಲಿ ಅಗತ್ಯ ಮೂಲ ಸೌಕರ್ಯಗಳಿಲ್ಲ. ವಿದ್ಯುತ್ ಇಲ್ಲದೇ ದೀಪದ ಬೆಳಕಿನಲ್ಲಿ 6ನೇ ತರಗತಿ ಓದುತ್ತಿರುವ ರಾಹುಲ್‌ಗೆ ಉನ್ನತ ವಿದ್ಯಾಭ್ಯಾಸ ಮಾಡಬೇಕೆನ್ನುವ ಛಲವಿದೆ. ಹೀಗಾಗಿ ಈ ಬಡ ಕುಟುಂಬ ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ.
ಇವರಿಗೆ ಸಹಾಯ ಮಾಡ ಬಯಸುವವರು 9980157229 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಬಹುದು.