ETV Bharat / city

ಮೈಸೂರಿನ ಗುರುಕುಲದಲ್ಲಿ ವ್ಯವಸ್ಥಾಪಕನಿಂದ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ : ಆರೋಪಿ ಬಂಧನ - ಮೈಸೂರು ಗುರುಕುಲದ ಮ್ಯಾನೇಜರ್ ಬಂಧನ

ಗುರುಕುಲದಲ್ಲಿನ ಹೆಣ್ಣು ಮಕ್ಕಳಿಗೆ ಸಂಗೀತ ಹೇಳಿಕೊಡಲು ಸಂಗೀತ ಶಿಕ್ಷಕರನ್ನು ವ್ಯವಸ್ಥಾಪಕರ ಒಪ್ಪಿಗೆಯ ಮೇರೆಗೆ ನೇಮಿಸಲಾಗಿತ್ತು. ಈ ನಡುವೆ ವ್ಯವಸ್ಥಾಪಕರ ದುರ್ವತನೆ ಸಂಗೀತ ಶಿಕ್ಷಕರ ಗಮನಕ್ಕೆ ಬಂದಿದ್ದು, ಅವರು ವ್ಯವಸ್ಥಾಪಕರ ನಡವಳಿಕೆಯ ದಾಖಲೆಗಳೊಂದಿಗೆ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದಾರೆ. ಇದಾದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ..

sexual harassment in Mysuru Gurukula: Manager arrested
ಮೈಸೂರಿನ ಗುರುಕುಲದಲ್ಲಿ ವ್ಯವಸ್ಥಾಪಕನಿಂದ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ: ಆರೋಪಿ ಬಂಧನ
author img

By

Published : Mar 30, 2022, 12:17 PM IST

ಮೈಸೂರು : ನಗರದ ಹೆಬ್ಬಾಳದ ಬಳಿ‌ ಇರುವ ಗುರುಕುಲದಲ್ಲಿರುವ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿನ ವ್ಯವಸ್ಥಾಪಕನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಇನ್ಫೋಸಿಸ್ ಬಳಿ‌ ಇರುವ ಗುರುಕುಲದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಗುರುಕುಲದ ವ್ಯವಸ್ಥಾಪಕ ಗುರುಕುಲದಲ್ಲಿ ಸಾಕಷ್ಟು ದಿನದಿಂದ ಹೆಣ್ಣು ಮಕ್ಕಳ ಮೇಲೆ ದೈಹಿಕ ಹಿಂಸೆ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗುರುಕುಲ ಶಾಖೆಗಳು ರಾಜ್ಯದಲ್ಲಿ ಅನೇಕ ನಗರಗಳಲ್ಲಿವೆ. ಮೈಸೂರಿನಲ್ಲಿರುವ ಗುರುಕುಲದಲ್ಲಿ ಬೇರೆ ಬೇರೆ ಜಿಲ್ಲೆಯ ವಿವಿಧ ಗ್ರಾಮಗಳ‌ 18 ಮಕ್ಕಳು ದಾಖಲಾಗಿದ್ದಾರೆ. ಈ ಗುರುಕುಲದಲ್ಲಿ ಬಡ ಹೆಣ್ಣು ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ಊಟ ಹಾಗೂ ವಸತಿಯನ್ನು ಕಲ್ಪಿಸಲಾಗಿದೆ. 18 ವರ್ಷಕ್ಕಿಂತ ಒಳಗಿನ ಹೆಣ್ಣು ಮಕ್ಕಳು ಇಲ್ಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿಯ ಮೇಲುಸ್ತುವಾರಿಯಲ್ಲಿ ವ್ಯವಸ್ಥಾಪಕರನ್ನು ನೇಮಿಸಿಕೊಳ್ಳಲಾಗುತ್ತದೆ.

ಗುರುಕುಲದಲ್ಲಿನ ಹೆಣ್ಣು ಮಕ್ಕಳಿಗೆ ಸಂಗೀತ ಹೇಳಿಕೊಡಲು ಸಂಗೀತ ಶಿಕ್ಷಕರನ್ನು ವ್ಯವಸ್ಥಾಪಕರ ಒಪ್ಪಿಗೆಯ ಮೇರೆಗೆ ನೇಮಿಸಲಾಗಿತ್ತು. ಈ ನಡುವೆ ವ್ಯವಸ್ಥಾಪಕರ ದುರ್ವತನೆ ಸಂಗೀತ ಶಿಕ್ಷಕರ ಗಮನಕ್ಕೆ ಬಂದಿದ್ದು, ಅವರು ವ್ಯವಸ್ಥಾಪಕರ ನಡವಳಿಕೆಯ ದಾಖಲೆಗಳೊಂದಿಗೆ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದಾರೆ. ಇದಾದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ಸಂಗೀತ ಶಿಕ್ಷಕರು ನೀಡಿದ ದೂರಿನ ಅನ್ವಯ ಸ್ಥಳವನ್ನು ಪರಿಶೀಲನೆ ನಡೆಸಿರುವ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಮಕ್ಕಳ ಹೇಳಿಕೆ ಪಡೆದಿದ್ದಾರೆ. ಮಕ್ಕಳ ಹೇಳಿಕೆ ನಿಜವೆಂದು ಮೇಲ್ನೋಟಕ್ಕೆ ಕಂಡ ಬಂದ ಕಾರಣಕ್ಕೆ ಅಲ್ಲಿನ 17 ಮಕ್ಕಳನ್ನು ಬಾಲ ಮಂದಿರ ಹಾಗೂ ಬಾಪೂಜಿ ಮಕ್ಕಳ ಮನೆಗೆ ಸ್ಥಾಳಾಂತರಿಸಲಾಗಿದೆ. ಗುರುಕುಲ ಶಾಖೆಯ ವ್ಯವಸ್ಥಾಪಕನಾದ ಗಿರೀಶ್ (40) ಎಂಬಾತನ ಮೇಲೆ ಆರೋಪವಿದ್ದು, ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಗಿರೀಶ್​​ನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಪಂಕ್ಚರ್​ ಶಾಪ್​ ಮುಂದೆ ನಿಂತಿದ್ದ ಲೋಡರ್​ಗೆ ಕಂಟೈನರ್​ ಡಿಕ್ಕಿ.. ಐವರು ಸಾವು, ಹಲವರಿಗೆ ಗಾಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.