ETV Bharat / city

ಪ್ರಧಾನಿಗೆ ನೇತಾಜಿ ಪ್ರತಿಮೆ ಉಡುಗೊರೆ ಕೊಟ್ಟ ಮೈಸೂರಿನ ಅರುಣ್: ಇಂಡಿಯಾ ಗೇಟ್ ಬಳಿ ಬೋಸ್​ ವಿಗ್ರಹ ನಿರ್ಮಿಸುವ ಹೊಣೆ - ಪ್ರಧಾನಿ ಮೋದಿ ಭೇಟಯಾದ ಸಂಸದ ಪ್ರತಾಪ್ ಸಿಂಹ

ದೆಹಲಿಯ ಇಂಡಿಯಾ ಗೇಟ್ ಬಳಿ ಸುಭಾಶ್ಚಂದ್ರ ಬೋಸ್​ ಪ್ರತಿಮೆ ನಿರ್ಮಿಸಲು ಅರುಣ್ ಯೋಗಿರಾಜ್ ಅವರಿಗೆ ನೀಡಲಾಗುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.

ಪ್ರಧಾನಿಗೆ ನೇತಾಜಿ ಪ್ರತಿಮೆ ಉಡುಗೊರೆ ಕೊಟ್ಟ ಮೈಸೂರಿನ ಅರುಣ್

author img

By

Published : Apr 5, 2022, 7:25 PM IST

Updated : Apr 5, 2022, 7:33 PM IST

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೈಸೂರಿನ ಶಿಲ್ಪಿಯಾದ ಅರುಣ್ ಯೋಗರಾಜ್ ಅವರು ಭೇಟಿ ಮಾಡಿ ಸುಭಾಶ್ಚಂದ್ರ ಬೋಸ್ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು. ಶಿಲ್ಪ ಕಲೆಯಲ್ಲಿ ಅರುಣ್ ಯೋಗಿರಾಜ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ್ದಾರೆ. ಇತ್ತೀಚೆಗೆ ಕೇದಾರನಾಥ್​ನಲ್ಲಿ ಅವರು ಕೆತ್ತನೆ ಮಾಡಿದ ಆದಿ ಶಂಕರಾಚಾರ್ಯ ಪ್ರತಿಮೆಯನ್ನು ಉದ್ಘಾಟಿಸಲಾಗಿದೆ.

ಮಂಗಳವಾರ ಪ್ರಧಾನಿ ಮೋದಿ ಅವರನ್ನು ಮಾಡಿರುವ ಅರುಣ್ ಯೋಗಿರಾಜ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಬೋಸ್​ ಪ್ರತಿಮೆ ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಸ್ವತಃ ಪ್ರಧಾನಿ ಅವರೇ ಟ್ವೀಟ್​ ಮಾಡಿದ್ದಾರೆ. 'ಇವತ್ತು ಅರುಣ್ ಯೋಗಿರಾಜ್ ಅವರನ್ನು ಭೇಟಿ ಮಾಡಿದ್ದಕ್ಕೆ ಸಂತೋಷವಾಗಿದೆ. ನೇತಾಜಿ ಬೋಸ್ ಅವರ ಶಿಲ್ಪವನ್ನು ನೀಡಿರುವುದಕ್ಕೆ ಅವರಿಗೆ ಕೃತಜ್ಞರಾಗಿರುತ್ತೇವೆ' ಎಂದು ಮೋದಿ ಟ್ವೀಟ್​​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಇಂಡಿಯಾ ಗೇಟ್ ಬಳಿ ಬೋಸ್​ ಪ್ರತಿಮೆ: ಪ್ರಧಾನಿ ಮೋದಿ ಮತ್ತು ಶಿಲ್ಪಿ ಅರುಣ್ ಯೋಗರಾಜ್ ಭೇಟಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ದೆಹಲಿಯ ಇಂಡಿಯಾ ಗೇಟ್ ಬಳಿ ಸುಭಾಶ್ಚಂದ್ರ ಬೋಸ್​ ಪ್ರತಿಮೆಯನ್ನು ನಿರ್ಮಿಸಲು ಅರುಣ್ ಯೋಗಿರಾಜ್ ಅವರಿಗೆ ನೀಡಲಾಗುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

  • It’s always an honour to meet our beloved PM @narendramodi ji, this time I met him along with our renowned sculptor Arun Yogiraj n my family. Thank you @JoshiPralhad Sir for all the help n blessings. And invited Modiji to Mys for this year’s Yoga Day. pic.twitter.com/spJ7FUl3YA

    — Pratap Simha (@mepratap) April 5, 2022 " class="align-text-top noRightClick twitterSection" data=" ">

ಯೋಗ ಕಾರ್ಯಕ್ರಮಕ್ಕೆ ಪ್ರಧಾನಿಗೆ ಆಹ್ವಾನ: ಮೈಸೂರಿನಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಧಾನಿ ಮೋದಿ ಅವರಿಗೆ ಸಂಸದ ಪ್ರತಾಪ್ ಸಿಂಹ ಆಹ್ವಾನ ನೀಡಿದ್ದಾರೆ. ಕುಟುಂಬ ಸಮೇತರಾಗಿ ಪ್ರಧಾನಿಯನ್ನು ಭೇಟಿ ಮಾಡಿದ ಸಂಸದರು, ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಜೂನ್​21ರಂದು ಮೈಸೂರಿನಲ್ಲಿ ಆಯೋಜಿಸಲಾಗಿರುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಧಾನಿ ಅವರಿಗೆ ಆಹ್ವಾನಿಸಲಾಯಿತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಯಾರಿಗೆ ಬೇವು, ಯಾರಿಗೆ ಬೆಲ್ಲ: ಸಂಪುಟ ಸರ್ಕಸ್​​ಗೆ ಬೀಳುತ್ತಾ ತೆರೆ?

Last Updated : Apr 5, 2022, 7:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.