ಮೈಸೂರು: ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಸಿಎಂ ಬಿ.ಎಸ್.ಯಡಿಯೂರಪ್ಪ ಇದ್ದ ವೇದಿಕೆಯಲ್ಲಿ ಪರೋಕ್ಷವಾಗಿ ಶಾಸಕ ಎಸ್.ಎ.ರಾಮದಾಸ್ ಅಸಮಾಧಾನ ಹೊರಹಾಕಿದ್ದಾರೆ.
ಜೆ.ಪಿ.ನಗರದಲ್ಲಿ ಅಕ್ಕ ಮಹಾದೇವಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಕ್ಕಮಹಾದೇವಿಯ ವಚನಗಳ ಅನುಸಾರ ಎಲ್ಲವೂ ಬೇಕು ಎಂಬ ಭ್ರಮೆಯಿಂದ ನಾನು ಹೊರ ಬಂದಿದ್ದೇನೆ. ಶಾಸಕನಾಗಿರುವೆ, ಮಂತ್ರಿಯಾಗಬೇಕಿತ್ತು ಈಗ ಮಂತ್ರಿಯಾಗಬೇಕೆಂಬ ಬಯಕೆ ತ್ಯಜಿಸಿದ್ದೇನೆ ಎಂದು ಪರೋಕ್ಷವಾಗಿ ನುಡಿದರು.
ಬಸವಣ್ಣನ ವಚನದಂತೆ ಇವನಾರವ ಇವನಾರವ ಎನ್ನದೇ ನನ್ನನ್ನೂ ಒಳಗೊಂಡಂತೆ ಇವ ನಮ್ಮವ ಇವ ನಮ್ಮವ ಎಂದು ಭಾವಿಸಿ. ಈ ಮೂಲಕ ನನ್ನನ್ನ ನಿಮ್ಮವನೆಂದು ಭಾವಿಸಿ, ನನಗೆ ಯಾವ ಭ್ರಮೆಯೂ ಇಲ್ಲ, ಯಾವ ಆಸೆ ಕನಸುಗಳೂ ಇಲ್ಲ. ಮಂತ್ರಿ ಆಗುವ ಆಸೆಯಿಲ್ಲ ಎಂದು ಸಿಎಂ ಎದುರೇ ವಚನದ ಮೂಲಕ ಟಾಂಗ್ ಕೊಟ್ಟರು.
ಇದನ್ನೂ ಓದಿ.. ತಪ್ಪಿದ ಸಚಿವ ಸ್ಥಾನ.. ಟ್ವಿಟರ್ನಲ್ಲಿ ಶಾಸಕ ಎಸ್ ಎ 'ರಾಂಗ್'ದಾಸ್!
ವಿಶ್ವ ಕಂಡ ದಾರ್ಶನಿಕ ಮಹನೀಯರಲ್ಲಿ ಅಕ್ಕಮಹಾದೇವಿ ಒಬ್ಬರು. ಅವರಂತೆ ಸಿಎಂ ಕೂಡ ನಡೆದು ಬಂದಿದ್ದಾರೆ. ಅಕ್ಕ ಮಹಾದೇವಿಯ ಊರಾದ ಶಿಕಾರಿಪುರದಿಂದಲೇ ಬಿ.ಎಸ್.ವೈ ಸಿಎಂ ಆಗಿದ್ದಾರೆ. ಅದನ್ನು ಟೂರಿಸ್ಟ್ ಕೇಂದ್ರವಾಗಿ ಪರಿವರ್ತಿಸಲು ತೀರ್ಮಾನ ಮಾಡಲಾಗಿದೆ ಎಂದರು.