ಮೈಸೂರು: ಜಮೀರ್ ಅಂತ ಒಬ್ಬ ಎಂಎಲ್ಎ ಇದ್ದಾರೆ. ಕಲ್ಲು ಹೊಡೆದರೆ, ಬೆಂಕಿ ಹಚ್ಚಿದರೆ ಅವರಿಗೆ ಓದು ಬರಹ ಬರಲ್ಲ ಏನು ಗೊತ್ತಿಲ್ಲ ಅಂತಾರೆ. ಅಂತವರು ನಮ್ಮಲ್ಲೂ ಇದ್ದಾರೆ. ಇವರಿಗೆ ಅಆಇ ಕೇಳಿದ್ರೆ ಬರಲ್ಲ. ಮಸಿ ಬಳಿತೀವಿ ಅಂತ ಬರುತ್ತಾರೆ. ಇವರನ್ನು ನೋಡಿದರೆ ನಮಗೂ ಅಯ್ಯೋ ಪಾಪ ಅನ್ಸುತ್ತೆ ಎಂದು ಹೇಳುವ ಮೂಲಕ ಬೆಂಗಳೂರಿನಲ್ಲಿ ಮಸಿ ಬಳಿದ ವ್ಯಕ್ತಿಗಳಿಗೆ ರಿಷಿ ಕುಮಾರ್ ಸ್ವಾಮಿ ತಿರುಗೇಟು ನೀಡಿದರು.
ರಿಷಿ ಕುಮಾರ್ ಸ್ವಾಮಿ ಮುಖಕ್ಕೆ ಮಸಿ ಬಳಿದ ವಿಚಾರವಾಗಿ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಾಗೇ ನಡೆದುಕೊಳ್ಳುವವರಿಗೆ ಏನು ಮಾಡಲು ಆಗಲ್ಲ. ಅವರ ವಿರುದ್ಧ ಜೀವ ಬೆದರಿಕೆ ಹಾಕಿದ್ದಾರೆ ಅಂತ ದೂರು ಕೊಟ್ಟಿದ್ದೇವೆ. ಈಗ ಮಸಿ ಹಾಕಿದ್ದೇವೆ ಮುಂದೆ ಮಾರಿಹಬ್ಬ ಮಾಡುತ್ತೇವೆ ಅಂತಾರೆ. ನನ್ನ ಕೊಲೆ ಮಾಡಬಹುದು ಅಷ್ಟೇ. ಯಾರೇ ಅವಮಾನ ಮಾಡಿದರೆ ಸನ್ಮಾನ ಮಾಡಲು ಚಾಮುಂಡಮ್ಮ ಇದ್ದಾಳೆ ಎಂದು ತಿಳಿಸಿದರು.
ಪೇಟ ಬಿಟ್ಟು ಕಣ್ಣಿಗೆ ಗ್ಲಾಸ್ ಧರಿಸಿ ಚಾಮುಂಡಿ ದೇವಾಲಯಕ್ಕೆ ಪ್ರವೇಶ: ಪೇಟ ತೊಡದಿದ್ದಕ್ಕೆ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿದ್ದಕ್ಕೆ ಸ್ಪಷ್ಟನೆ ನೀಡಿದ ರಿಷಿ ಕುಮಾರ್, ಮೊನ್ನೆ ಮಸಿ ಬಳಿದಾಗ ಪೇಟ ಕಪ್ಪು ಬಣ್ಣವಾಗಿದೆ. ನಾನು ಪೇಟ ತರುವುದು ದಾವಣಗೆರೆಯಿಂದ. ಹಾಗಾಗಿ ಪೇಟ ಧರಿಸಿಲ್ಲ. ಕಣ್ಣಿಗೆ ಗಾಯವಾಗಿದೆ, ಹೀಗಾಗಿ ಗ್ಲಾಸ್ ಧರಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ:ನ್ಯಾಯಾಲಯದ ತಡೆಯಾಜ್ಞೆ ಇದ್ರೂ ಪೀಠಾರೋಹಣ ಮಾಡಿದ ಬಿ ಜೆ ಪುಟ್ಟಸ್ವಾಮಿ