ETV Bharat / city

ಪತ್ನಿಯನ್ನ ಚುಡಾಯಿಸಿದ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ: ಮೈಸೂರಲ್ಲಿ ಡಬಲ್​ ಮರ್ಡರ್​ - Mysore Double murder case

ಪತ್ನಿಯನ್ನ ಚುಡಾಯಿಸಿದ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ ನಡೆದಿದ್ದು, ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ. ಮೈಸೂರಿನ ಬೋಗಾದಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.

Mysore
ಮೈಸೂರು
author img

By

Published : Dec 12, 2021, 10:02 AM IST

ಮೈಸೂರು: ಪತ್ನಿಯನ್ನ ಆಗಾಗ್ಗೆ ಚುಡಾಯಿಸುತ್ತಿದ್ದ ಸ್ನೇಹಿತನನ್ನ ಎಣ್ಣೆ ಪಾರ್ಟಿಯಲ್ಲಿ ಕೊಚ್ಚಿ‌‌ ಕೊಂದಿರುವ ಘಟನೆ ಬೋಗಾದಿ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಸ್ನೇಹಿತನಿಗೆ ಸಹಾಯ ಮಾಡಿದ್ದ ಮತ್ತೊಬ್ಬ ಗೆಳೆಯನೂ ಹತ್ಯೆಯಾಗಿದ್ದಾನೆ.

ಹೆಚ್.ಡಿ.ಕೋಟೆ ತಾಲೂಕಿನ ಕೊತ್ತೆಗಾಲ ಗ್ರಾಮದ ರವಿ ಹಾಗು ಬಸವ ಕೊಲೆಯಾದವರು. ಹತ್ಯೆಗೈದ ಆರೋಪಿ ಮಹೇಶ್ ಹಾಗು ಕೊಲೆಗೆ ಸಹಕರಿಸಿದ ಮತ್ತೊಬ್ಬ ಸ್ನೇಹಿತನನ್ನು ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೋಗಾದಿ ಮುಖ್ಯ ರಸ್ತೆಯಲ್ಲಿ ನಾಲ್ವರು ಸ್ನೇಹಿಯರು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಮಹೇಶ್ ಪತ್ನಿಯನ್ನ ಆಗಾಗ್ಗೆ ಚುಡಾಯಿಸುತ್ತಿದ್ದ ವಿಚಾರ ಪ್ರಸ್ತಾಪವಾಗಿ ಸ್ನೇಹಿತರ ನಡುವೆ ಗಲಾಟೆಯಾಗಿದೆ. ಈ ಸಂದರ್ಭ ಮಹೇಶ್ ಪಿಕಾಸಿಯಿಂದ ರವಿ ತಲೆಗೆ ಹೊಡೆದು ಕೊಂದಿದ್ದಾನೆ. ಈ ವೇಳೆ ಸ್ನೇಹಿತನ ಬೆಂಬಲಕ್ಕೆ ಬಂದ ಮತ್ತೊಬ್ಬ ಸ್ನೇಹಿತ ಬಸವ ಕೂಡ ಕೊಲೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹೆಂಡತಿ ಚುಡಾಯಿಸಿದ ಆರೋಪ.. ಬೆಂಗಳೂರಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ದೂರು ಪ್ರತಿದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.