ಮೈಸೂರು: ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದು ನಾಯಿಗಳ ದಾಳಿಗೆ ಸಿಲುಕಿದ್ದ ಎರಡು ಜಿಂಕೆಗಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ವೀರನಹೊಸಹಳ್ಳಿ ವ್ಯಾಪ್ತಿಗೆ ಎರಡು ಜಿಂಕೆಗಳು ಆಹಾರ ಅರಸಿಕೊಂಡು ಬಂದಿದ್ದವು. ಅಲ್ಲಿನ ಹೊಸೂರು ಗ್ರಾಮದ ಶಿವರಾಜು ಎಂಬುವರ ಜಮೀನಿಗೆ ಬಂದಿದ್ದವು.
ಜಿಂಕೆಗಳ ಮೇಲೆ ದಾಳಿ ನಡೆಸಿದ ನಾಯಿಗಳು, ಅಟ್ಟಿಸಿಕೊಂಡು ಗ್ರಾಮದೊಳಗೆ ಬಂದಿವೆ. ಆಗ ಗ್ರಾಮಸ್ಥರು ಬೀದಿ ನಾಯಿಗಳನ್ನು ಓಡಿಸಿ ಜಿಂಕೆಗಳನ್ನು ರಕ್ಷಿಸಿದ್ದಾರೆ. ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಜಿಂಕೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಮ್ಮ ಸುಪರ್ದಿಗೆ ಪಡೆದಿದ್ದಾರೆ.