ಮೈಸೂರು : ಆನ್ಲೈನ್ ತರಗತಿ ನಡೆಯುತ್ತಿರುವ ವೇಳೆ ಯುವಕನೊಬ್ಬನ ಐಡಿಯಿಂದ ಅಶ್ಲೀಲ ವಿಡಿಯೋವನ್ನು ದುಷ್ಕರ್ಮಿಗಳು ಪ್ರಸಾರ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಈ ಸಂಬಂಧ ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆನ್ಲೈನ್ ಮೂಲಕ ಗೂಗಲ್ ಮೀಟ್ನಲ್ಲಿ ತರಗತಿ ನಡೆಯುತ್ತಿರುವ ವೇಳೆ ಲಿಂಕ್ ಮೂಲಕ ತರಗತಿಗೆ ಸೇರಿಕೊಂಡ ಅಪರಿಚಿತನೊಬ್ಬ ಎಲ್ಲಾ ವಿದ್ಯಾರ್ಥಿಗಳ ಮೊಬೈಲ್ಗಳಿಗೆ ಅಶ್ಲೀಲ ವಿಡಿಯೋವನ್ನು ಹರಿಬಿಟ್ಟಿದ್ದಾನೆ.
ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಇದನ್ನು ಕಂಡು ಮುಜುಗರಕ್ಕೆ ಒಳಗಾಗಿದ್ದಾರೆ. ಅಲ್ಲದೇ ಇದನ್ನು ಕಂಡ ಶಿಕ್ಷಕಿ ಗಾಬರಿಯಾಗಿದ್ದು, ಕೂಡಲೇ ಕಾಲೇಜಿನ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದಾರೆ.
ಬಳಿಕ ಕಾಲೇಜು ಆಡಳಿತ ಮಂಡಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆನ್ಲೈನ್ ಪಾಠದ ಲಿಂಕ್ ಅನ್ನು ಯಾವ ವಿದ್ಯಾರ್ಥಿ ಬೇರೆಯವರಿಗೆ ಶೇರ್ ಮಾಡಿದ್ದಾರೆ? ಮತ್ತು ಯಾವ ನಂಬರ್ನಿಂದ ಅಶ್ಲೀಲ ವಿಡಿಯೋ ಪ್ರಸಾರವಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಈ ಬಗ್ಗೆ ಗೂಗಲ್ ಕಂಪನಿಗೆ ವಿವರ ಕೋರಿ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಪತ್ತೆ ಮಾಡುವುದಾಗಿ ಸೈಬರ್ ಪೊಲೀಸರು ತಿಳಿಸಿದ್ದಾರೆ.
ಓದಿ: ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಭಯೋತ್ಪಾದಕರಿಂದ ಗುಂಡಿನ ದಾಳಿ!