ETV Bharat / city

ಮೈಸೂರಿನಲ್ಲಿ ಪ್ರಧಾನಿ ಯೋಗಕ್ಕಾಗಿ ಬಿಡುವ ನೀಡಿದ ಮಳೆ: ಐಎಂಡಿ ಮೊದಲೇ ಸೂಚನೆ ಕೊಟ್ಟಿತ್ತು - ದಿನಾಚರಣೆ ಕಾರ್ಯಕ್ರಮ ಮಳೆ ಸಾಧ್ಯತೆಯಿಲ್ಲ

ಬೆಳಗ್ಗೆ ಸ್ವಚ್ಛದ ಆಕಾಶ ಕಾಣುತ್ತಿದ್ದು ಸುಗಮ ಯೋಗಕ್ಕೆ ಮಳೆ ಬಿಡುವು ನೀಡಿದೆ. ಸಂಜೆ ಅಥವಾ ರಾತ್ರಿ ವೇಳೆ ನಗರದ ಹಲವು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

PM Modi
ಪ್ರಧಾನಿ ನರೇಂದ್ರ ಮೋದಿ
author img

By

Published : Jun 21, 2022, 6:52 AM IST

ಮೈಸೂರು: ಇಂದು ಬೆಳಗ್ಗೆ ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದಾರೆ. ಇಂದು ನಗರದಲ್ಲಿ ಮಳೆ ಮುಕ್ತವಾಗುವ ಸಾಧ್ಯತೆಯಿದೆ ಎಂದು ಐಎಂಡಿ ಸೋಮವಾರವೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇಲಾಖೆಯ ಮುನ್ಸೂಚನೆಯಂತೆಯೇ ನಗರದಲ್ಲಿ ಪರಿಶುದ್ಧ ವಾತಾವರಣ ಇದ್ದು ಯೋಗ ಕಾರ್ಯಕ್ರಮ ಸಾಂಗವಾಗಿ ನೆರವೇರುತ್ತಿದೆ.

ಐಎಂಡಿ ಪ್ರಕಾರ, ಜೂನ್ 1 ರಿಂದ 15 ರವರೆಗೆ ಅಧಿಕ ಮಳೆ ಬಿದ್ದ ಒಂಬತ್ತು ಜಿಲ್ಲೆಗಳಲ್ಲಿ ಮೈಸೂರು ಸೇರಿದೆ. ಆಯುಷ್ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರ 2022ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ 8ನೇ ಆವೃತ್ತಿಯ ಮುಖ್ಯ ಕಾರ್ಯಕ್ರಮವನ್ನು ಮೈಸೂರಿನ ಅರಮನೆಯಲ್ಲಿ ಆಚರಿಸಲಾಗುತ್ತಿದೆ.

ಈ ವರ್ಷದ ಅಂತಾರಾಷ್ಟ್ರೀಯ ಥೀಮ್ 'ಮಾನವೀಯತೆಗಾಗಿ ಯೋಗ' ಎಂಬುವುದಾಗಿದೆ. ಮೈಸೂರಿನಲ್ಲಿ ಪ್ರಧಾನಿಯವರೊಂದಿಗೆ 15,000ಕ್ಕೂ ಹೆಚ್ಚು ಮಂದಿ ಯೋಗ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮೋದಿ‌ ಸ್ವಾಗತಿಸಲು ಬಿಜೆಪಿ ಮುಖಂಡರೊಂದಿಗೆ ಬಂದ ಜಿಟಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.