ಮೈಸೂರು: ಕೊನೆ ಗಳಿಗೆಯಲ್ಲಿ ಮೈಸೂರು-ಗೋವಾ ವಿಮಾನ ರದ್ದಾದ ಹಿನ್ನೆಲೆಯಲ್ಲಿ ಏರ್ಪೋರ್ಟ್ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರ ಮಧ್ಯಾಹ್ನ 3.25ಕ್ಕೆ ಆಗಮಿಸಬೇಕಿದ್ದ ವಿಮಾನ ರಾತ್ರಿ 11 ಕ್ಕೆ ಬರುತ್ತದೆ ಎಂದು ಸಿಬ್ಬಂದಿ ಹೇಳಿದ್ದರು. ಆದ್ರೆ ಫ್ಲೈಟ್ ರದ್ದಾಗಿದ್ದು ಏರ್ಪೋರ್ಟ್ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಕೋಪಗೊಂಡರು.
ಐವತ್ತಕ್ಕೂ ಹೆಚ್ಚು ಪ್ರಯಾಣಿಕರು ಗೋವಾಕ್ಕೆ ತೆರಳಲು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಮಧ್ಯಾಹ್ನದಿಂದ ರಾತ್ರಿವರೆಗೂ ಕಾದು ಸುಸ್ತಾಗಿ, ಸಿಬ್ಬಂದಿಯನ್ನು ವಿಚಾರಿಸಿದಾಗ ವಿಮಾನ ರದ್ದಾಗಿರುವುದು ತಿಳಿದು ಬಂದಿದೆ. ಈ ವೇಳೆ ಪ್ರಯಾಣಿಕರು, ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ಸಹಾಯದಿಂದ ಪ್ರಯಾಣಿಕರನ್ನು ಹೊರ ಹಾಕಲು ಸಿಬ್ಬಂದಿ ಯತ್ನಿಸಿದರು ಎನ್ನಲಾಗಿದೆ.
ಇದನ್ನೂ ಓದಿ: 15 ವರ್ಷಗಳ ಸಂಸಾರ, 6 ಮಕ್ಕಳ ಮುಂದೆ ಮೂವರನ್ನು ಮದುವೆಯಾದ 42 ವರ್ಷದ ವ್ಯಕ್ತಿ