ETV Bharat / city

ರಾಜಪಥದಲ್ಲಿ ಎನ್​ಸಿಸಿ ಕೆಡೆಟ್ಸ್​​​ ನೇತೃತ್ವ ವಹಿಸಿದ ಮೈಸೂರಿನ ವಿದ್ಯಾರ್ಥಿನಿ - ಎನ್​ಸಿಸಿ ನೇತೃತ್ವ ವಹಿಸಿದ ಮೈಸೂರಿನ ಪ್ರಮೀಳಾ ಕುನ್ವರ್​

ಪರೇಡ್​ಗೆ ಆಯ್ಕೆಯಾದ ದೇಶದ ಎಲ್ಲಾ 17 ಎನ್​ಸಿಸಿ ನಿರ್ದೇಶನಾಲಯ ಘಟಕಗಳ ಸೀನಿಯರ್​ ವಿಂಗ್​ ಕೆಡೆಟರ್​ಗಳಿಗೆ ಕಮಾಂಡಿಂಗ್​ ಲೀಡರ್​ ಆಗಿ ಪ್ರಮೀಳಾ ಕುನ್ವರ್​ ಅವರು ಕಾರ್ಯನಿರ್ವಹಿಸುವ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಎನ್​ಸಿಸಿ ತಿಳಿಸಿದೆ..

mysuru-girl-pramila
ಮೈಸೂರಿನ ವಿದ್ಯಾರ್ಥಿನಿ
author img

By

Published : Jan 26, 2022, 1:04 PM IST

ನವದೆಹಲಿ : ಗಣರಾಜ್ಯೋತ್ಸವ ಸಮಾರಂಭದಲ್ಲಿ ದೆಹಲಿಯ ರಾಜಪಥದಲ್ಲಿ ನಡೆದ ಎನ್​ಸಿಸಿಯ ಪರೇಡ್​ನಲ್ಲಿ ಮೈಸೂರಿನ ಪ್ರಮೀಳಾ ಕುನ್ವರ್​ ತಂಡದ ನೇತೃತ್ವ ವಹಿಸಿ ಕರುನಾಡಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬಿಎಸ್​ಸಿ ವ್ಯಾಸಂಗ ಮಾಡುತ್ತಿರುವ ಪ್ರಮೀಳಾ ಕುನ್ವರ್​ ಅವರ ತಂದೆ ನಗರದ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಿದ್ದಾರೆ. ಬಡತನದಲ್ಲಿ ಅರಳಿದ ಪ್ರತಿಭೆ ಪ್ರಮೀಳಾ ಕುನ್ವರ್​ ಎನ್​ಸಿಸಿಯ ಕೆಡೆಟರ್​ಗಳ ಮುಂದಾಳತ್ವ ವಹಿಸಿ ಈಗ ದೇಶದ ಗಮನ ಸೆಳೆದಿದ್ದಾರೆ.

ಪರೇಡ್​ಗೆ ಆಯ್ಕೆಯಾದ ದೇಶದ ಎಲ್ಲಾ 17 ಎನ್​ಸಿಸಿ ನಿರ್ದೇಶನಾಲಯ ಘಟಕಗಳ ಸೀನಿಯರ್​ ವಿಂಗ್​ ಕೆಡೆಟರ್​ಗಳಿಗೆ ಕಮಾಂಡಿಂಗ್​ ಲೀಡರ್​ ಆಗಿ ಪ್ರಮೀಳಾ ಕುನ್ವರ್​ ಅವರು ಕಾರ್ಯನಿರ್ವಹಿಸುವ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಎನ್​ಸಿಸಿ ತಿಳಿಸಿದೆ.

ಇದನ್ನೂ ಓದಿ: ಪರೇಡ್​​​​ನಲ್ಲಿ ಟ್ಯಾಬ್ಲೋಗಳ ಕಲರವ​...ದೆಹಲಿಯ ರಾಜ್​ಪಥದಲ್ಲಿ ದೇಶದ ಸಂಸ್ಕೃತಿಯ ಅನಾವರಣ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.