ಮೈಸೂರು: ದಕ್ಷಿಣಕಾಶಿ ನಂಜನಗೂಡಿನ ಐತಿಹಾಸಿಕ ಚಿಕ್ಕಜಾತ್ರಾ ಮಹೋತ್ಸವ (Nanjangud Srikanteshwara Rathotsava ) ಅದ್ಧೂರಿಯಾಗಿ ನೆರವೇರಿತು.
ಬೆಳಿಗ್ಗೆ 6.30 ರಿಂದ 7.30 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಮಹಾಮಂಗಳಾರತಿ ನೆರವೇರಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಮುಂಜಾನೆ ಕ್ಷೀರಾಭಿಷೇಕ, ಫಲ ಪಂಚಾಮೃತಾಭಿಷೇಕ, ರುದ್ರಾಭಿಷಕ, ಪ್ರಾತಃಕಾಲ ಪೂಜೆ, ನಿತ್ಯೋತ್ಸವ, ಸಂಗಮಕಾಲ ಪೂಜೆಯ ನಂತರ ಒಳ ಆವರಣದಲ್ಲಿ ಮಹಾಗಣಪತಿ ಪೂಜೆ, ನವಗ್ರಹ ಪೂಜೆ ಮಹಾಗಣಪತಿ ಚಂಡಿಕೇಶ್ವರ, ಪಾರ್ವತಿ ಶ್ರೀಕಂಠೇಶ್ವರ ಹಾಗು ಮನೋ ಅಮ್ಮಣಿನವರ ರಥೋತ್ಸವ ಸಾಗಿತು. ದೇವಸ್ಥಾನವನ್ನ ಒಂದು ಪ್ರದಕ್ಷಿಣೆ ಹಾಕಿದ ನಂತರ ರಥ ಸ್ವಸ್ಥಾನ ಸೇರಿತು.
ಶ್ರೀಕಂಠೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿದವು. ವಿವಿಧೆಡೆಯಿಂದ ಆಗಮಿಸಿದ ಭಕ್ತರು ಜಾತ್ರಾ ಮಹೋತ್ಸವವನ್ನ ಕಣ್ತುಂಬಿಕೊಂಡರು.