ETV Bharat / city

Lalitha Mahal Palace: ಪ್ರವಾಸಿಗರ ನೆಚ್ಚಿನ ತಾಣ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ - ಪ್ರವಾಸಿಗರ ನೆಚ್ಚಿನ ತಾಣ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್

ಮೈಸೂರಿನ ಒಡೆಯರು ಕಟ್ಟಿಸಿದ ಭವ್ಯ ಅರಮನೆಗಳು ಮೈಸೂರಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುವುದರ ಜತೆಗೆ ಪ್ರವಾಸಿಗರು, ಇವುಗಳಿಗೆ ಮನಸೋಲುವಂತೆ ಮಾಡಿದೆ. ಅಲ್ಲದೇ ಸಿನಿಪ್ರಿಯರ ನೆಚ್ಚಿನ ತಾಣವಾಗಿ ಲಲಿತ್ ಮಹಲ್ ಪ್ಯಾಲೇಸ್ ಇದೆ.

Lalitha Mahal Palace
ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್
author img

By

Published : Nov 19, 2021, 4:29 PM IST

ಮೈಸೂರು: ಪ್ರವಾಸಿಗರ ನಗರಿ ಮೈಸೂರಿನ ಪ್ರಮುಖ ಆಕರ್ಷಣೀಯ ಸ್ಥಳ ಲಲಿತ್ ಮಹಲ್ ಪ್ಯಾಲೇಸ್ (Lalitha Mahal Palace). ಮೈಸೂರಿಗೆ ಬಂದ ಪ್ರವಾಸಿಗರು ಲಲಿತ್ ಮಹಲ್ ಹೋಟೆಲ್ ನೋಡಿ ಒಂದು ಫೋಟೋ ತೆಗೆಸಿಕೊಂಡು ಹೋಗುವುದು ಸಾಮಾನ್ಯ.

ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸಿ ಸ್ಥಳಗಳು ಹಾಗು ಪಾರಂಪರಿಕ ಕಟ್ಟಡಗಳನ್ನು ನೋಡಲು ದೇಶ- ವಿದೇಶಗಳಿಂದ ಪ್ರತಿ ವರ್ಷ ಅಂದಾಜು 30 ಲಕ್ಷ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ಅದರಲ್ಲಿ ಪ್ರತಿಯೊಬ್ಬ ಪ್ರವಾಸಿಗರು ಮೈಸೂರಿನ ಸಾಂಪ್ರದಾಯಿಕ ಟಾಂಗಾ ಗಾಡಿ ಏರಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಾಣ ಮಾಡಿರುವ ಲಲಿತ್ ಮಹಲ್ ಪ್ಯಾಲೇಸ್ ನೋಡದೆ ಹೋಗಲಾರರು.

ವಿಶೇಷ ಅತಿಥಿಗಳಿಗಾಗಿ ನಿರ್ಮಿಸಲಾದ ಅರಮನೆ:

ಪ್ರವಾಸೋದ್ಯಮಕ್ಕೂ ಲಲಿತ್ ಮಹಲ್ ಪ್ಯಾಲೇಸ್​ಗೂ ಅವಿನಾಭಾವ ಸಂಬಂಧವಿದೆ. ಮೈಸೂರಿನ ಪ್ರವಾಸೋದ್ಯಮಕ್ಕೆ ಲಲಿತ್ ಮಹಲ್ ಕೊಡುಗೆ ಅಮೂಲ್ಯವಾದದ್ದು. ಮೈಸೂರಿನ ಒಡೆಯರ ಆಡಳಿತದ ಸಂದರ್ಭದಲ್ಲಿ ವೈಸ್​​​ರಾಯ್‌ಗಳಿಗಾಗಿ ಹಾಗು ರಾಜಮನೆತನದ ವಿಶೇಷ ಅತಿಥಿಗಳಿಗಾಗಿ ನಿರ್ಮಿಸಲಾದ ಅರಮನೆ ಇದಾಗಿದೆ.

ಅದೇ ರೀತಿ ಈಗ ರಾಜಕೀಯ ಗಣ್ಯ ವ್ಯಕ್ತಿಗಳು ಆಗಮಿಸುವ ಸಂದರ್ಭದಲ್ಲಿ ಈ ಹೋಟೆಲ್​​ನ್ನು ಅವರ ವಾಸ್ತವ್ಯ ಮತ್ತು ಆತಿಥ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಇಂದಿನ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಇಲ್ಲಿಯೇ ಉಳಿದುಕೊಂಡು ಆತಿಥ್ಯ ಸ್ವೀಕರಿಸಿದ್ದರು.

ಪ್ರವಾಸಿಗರ ನೆಚ್ಚಿನ ತಾಣ:

ಪಾಶ್ಚಿಮಾತ್ಯ ಶೈಲಿ ಹಾಗು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವೈಭವೋಪೇತ ಲಲಿತ್​​ ಮಹಲ್ ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ಈ ಅರಮನೆಯಲ್ಲಿ 54 ಐಷಾರಾಮಿ ಸೂಟ್​​​ಗಳಿದ್ದು, 22 ಹಳೆಯ ಕೊಠಡಿಗಳಿವೆ. ಅಲ್ಲದೇ 33 ಹೊಸದಾಗಿ ನಿರ್ಮಿಸಿರುವ ಕೊಠಡಿಗಳಿವೆ.

ಈಜುಕೊಳ, ಟೆನಿಸ್ ಕೋರ್ಟ್, ಜಾಗಿಂಗ್ ಟ್ರ್ಯಾಕ್, ಹೆಲ್ತ್ ಕ್ಲಬ್ ಮತ್ತು ಇತರ ಸೌಲಭ್ಯಗಳಿವೆ. ಅತಿಥಿಗಳು ಹತ್ತಿರದ ಗಾಲ್ಫ್ ಕೋರ್ಸ್ ಸಹ ಪ್ರವೇಶಿಸಬಹುದಾಗಿದೆ.‌ ಅಲ್ಲದೇ ಚಾಮುಂಡಿ ಬೆಟ್ಟದ ವಿಹಂಗಮ ನೋಟವು ಕಾಣ ಸಿಗುವುದರಿಂದ ಪ್ರವಾಸಿಗರು ಲಲಿತ ಮಹಲ್ ಪ್ಯಾಲೇಸ್ ಹೋಟೆಲ್​​ನಲ್ಲಿ ತಂಗಲು ಬಯಸುತ್ತಾರೆ.

ಸಿನಿಮಾ ದಿಗ್ಗಜರ ಪ್ಯಾಲೇಸ್:

ಲಲಿತ್​​ ಮಹಲ್ ಪ್ಯಾಲೇಸ್ ಸಿನಿಮಾ ದಿಗ್ಗಜರ ನೆಚ್ಚಿನ ಸ್ಥಳವಾಗಿದೆ. ವಿವಿಧ ರಾಜ್ಯಗಳ, ಹಲವು ಭಾಷೆಗಳ ಸಿನಿಮಾ ಚಿತ್ರೀಕರಣ ಇಲ್ಲಿ ನಡೆದಿದೆ. 1985ರಲ್ಲಿ ನಿರ್ಮಾಣವಾದ ಅಮಿತಾಭ್ ಬಚ್ಚನ್ ನಟನೆಯ ಮರ್ದ್, ಸಡಕ್, ತಮಿಳಿನ‌ ಹೆಸರಾಂತ ನಟ ತಲೈವಾ ರಜನಿಕಾಂತ್ ನಟನೆಯ ಲಿಂಗಾ, ತೆಲುಗು ನಟ ಪ್ರಭಾಸ್ ನಟನೆಯ ಅಡವಿ ರಾಮುಡು, ಯಶ್ ನಟಿಸಿದ್ದ ಕೆಜಿಎಫ್ ಸೇರಿ ನೂರಾರು ಚಿತ್ರಗಳು ಲಲಿತ್ ಮಹಲ್ ಅರಮನೆಯಲ್ಲಿ ಚಿತ್ರೀಕರಣಗೊಂಡಿವೆ.

ಇದನ್ನೂ ಓದಿ: ಶತಮಾನೋತ್ಸವ ಸಂಭ್ರಮದಲ್ಲಿ ಪಾರಂಪರಿಕ ಲಲಿತ ಮಹಲ್ ಹೋಟೆಲ್: ಇಲ್ಲಿದೆ ಭವ್ಯ ಅರಮನೆಯ ಇತಿಹಾಸ, ವೈಶಿಷ್ಟ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.