ಮೈಸೂರು: ಜಿಲ್ಲೆಯ ಶ್ರೀ ಜಯಚಾಮರಾಜೇಂದ್ರ ಮೃಗಾಲಯದ 12 ಅಡಿ ಎತ್ತರದ ಜಯಚಾಮರಾಜೇಂದ್ರ ಗಂಡು ಜಿರಾಫೆಯನ್ನು ಪ್ರಾಣಿ ವಿನಿಮಯ ಯೋಜನೆಯಡಿ ಸಂತಾನೋತ್ಪತ್ತಿಗಾಗಿ ಅಸ್ಸೋಂನ ಮೃಗಾಲಯಕ್ಕೆ ಕಳುಹಿಸಲಾಗಿದೆ.
ಮೈಸೂರು ಮೃಗಾಲಯದಿಂದ ಅಸ್ಸೋಂಗೆ ಈ ಜಿರಾಫೆಯನ್ನು ಕಳುಹಿಸಲು ವಿಶೇಷವಾದ ಟ್ರಕ್ ಸಿದ್ದಪಡಿಸಲಾಗಿದ್ದು, ರಸ್ತೆ ಮೂಲಕವೇ ಸಾಗಿಸಲಾಗಿದೆ. ನವೆಂಬರ್ 27 ರಂದು ಮೈಸೂರಿನಿಂದ ಹೊರಟ ಟ್ರಕ್ ಡಿಸೆಂಬರ್ 4 ರಂದು ಈಶಾನ್ಯ ರಾಜ್ಯ ಅಸ್ಸೋಂನ ರಾಜಧಾನಿ ಗುವಾಹಟಿ ಮೃಗಾಲಯ ತಲುಪಿದೆ. ಅಂದರೆ 7 ರಾತ್ರಿ, 8 ಹಗಲು, 3,200 ಕಿ.ಮೀ ದೂರವನ್ನು ಪ್ರಯಾಣಿಸಿ ಜಿರಾಫೆಯನ್ನು ಸುರಕ್ಷಿತವಾಗಿ ತಲುಪಿಸಲಾಗಿದೆ.
ಇದು ಇತಿಹಾಸದಲ್ಲೇ ವಿನೂತನ ದಾಖಲೆಯಾಗಿದೆ. ಈ ಗಂಡು ಜಿರಾಫೆಯನ್ನು ಅಲ್ಲಿನ ಮೃಗಾಲಯದಲ್ಲಿರುವ ಹೆಣ್ಣು ಜಿರಾಫೆಯೊಂದಿಗೆ ಸೇರಿಸಲಾಗಿದೆ.