ETV Bharat / city

ದಸರಾ 2019: ಮೊದಲ ಗಜಪಡೆ ಪಯಣಕ್ಕೆ ವಿದ್ಯುಕ್ತ ಚಾಲನೆ - Dasara

ನಾಡಹಬ್ಬ ದಸರಾ 2019ಅನ್ನು ಪ್ರವಾಹದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ತಿರ್ಮಾನಿಸಲಾಗಿದ್ದು, ಇದರ ಅಂಗವಾಗಿ ಇಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯ ಬಳಿ ಗಜ ಪಡೆಯ ಮೊದಲ ತಂಡಕ್ಕೆ 11:20ಕ್ಕೆ ಅಭಿಜಿನ್ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಆರಂಭಿಕ ಗಜ ಪಯಣಕ್ಕೆ ವಿದ್ಯುಕ್ತ ಚಾಲನೆ
author img

By

Published : Aug 22, 2019, 1:18 PM IST

ಮೈಸೂರು: 2019ರ ದಸರಾ ಮಹೋತ್ಸವದ ಆರಂಭಿಕ ಗಜಪಡೆ ಪಯಣಕ್ಕೆ ಇಂದು ಸಾಂಪ್ರದಾಯಿಕವಾಗಿ ಪುಷ್ಪಾರ್ಚನೆ ಮಾಡಿ ಚಾಲನೆ ನೀಡುವ ಮೂಲಕ ಈ ಬಾರಿಯ ದಸರಾಗೆ ವಿದ್ಯುಕ್ತ ಚಾಲನೆ ಸಿಕ್ಕಂತಾಯಿತು.

ಆರಂಭಿಕ ಗಜಪಡೆ ಪಯಣಕ್ಕೆ ವಿದ್ಯುಕ್ತ ಚಾಲನೆ

ನಾಡಹಬ್ಬ ದಸರಾ 2019ಅನ್ನು ಪ್ರವಾಹದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ತಿರ್ಮಾನಿಸಲಾಗಿದ್ದು, ಇದರ ಅಂಗವಾಗಿ ಇಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯ ಬಳಿ 6 ಆನೆಗಳಿರುವ ಗಜ ಪಡೆಯ ಮೊದಲ ತಂಡಕ್ಕೆ ಅಭಿಜಿನ್ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಈ ಬಾರಿ ಮೊದಲು ಲಗ್ನಕ್ಕೆ ಅನುಸಾರವಾಗಿ ಅರಣ್ಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಶಾಸಕ ರಾಮದಾಸ್ ಅವರು ಆನೆಗಳಿಗೆ ಪುಷ್ಪಾರ್ಚನೆ ಮಾಡಿದರು. ನಂತರ ತಡವಾಗಿ ಆಗಮಿಸಿದ ಸಚಿವ ಆರ್.ಅಶೋಕ್ 2ನೇ‌ ಬಾರಿ ಪುಷ್ಪಾರ್ಚನೆ ಮಾಡಿದರು.

ಮೊದಲ ತಂಡದಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ, ಅಭಿಮನ್ಯು, ವಿಜಯ, ವರಲಕ್ಷ್ಮೀ, ಈಶ್ವರ, ಧನಂಜಯ ಆನೆಗಳು ಆಗಮಿಸಲಿವೆ. ನಂತರ 2ನೇ ತಂಡದಲ್ಲಿ ಉಳಿದ 8 ಆನೆಗಳು ಆಗಮಿಸಲಿವೆ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಗಜ ಪಯಣದಲ್ಲಿ ಭಾಗವಹಿಸಿದ್ದೇನೆ. ಮುಂದೆ ಉಸ್ತುವಾರಿ ಸಚಿವ ಆಗುವುದು ದೇವರಿಗೆ ಬಿಟ್ಟ ವಿಚಾರ.‌ ನಾಡ ಹಬ್ಬ ದಸರಾವನ್ನು ಸಾಂಪ್ರದಾಯಿವಾಗಿ ಆಚರಿಸುವ ಬಗ್ಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನಡೆಸಲಾಗುವುದು ಎಂದರು.

Intro:ಮೈಸೂರು: ೨೦೧೯ರ ದಸರ ಮಹೋತ್ಸವದ ಆರಂಭಿಕ ಗಜ ಪಯಣಕ್ಕೆ ಇಂದು ಸಾಂಪ್ರದಾಯಿಕವಾಗಿ ಪುಷ್ಪಾರ್ಚನೆ ಮಾಡಿ ಚಾಲನೆ ನೀಡುವ ಮೂಲಕ ಈ ಬಾರಿ ದಸರಗೆ ವಿದ್ಯುಕ್ತ ಚಾಲನೆ ಸಿಕ್ಕಂತಾಯಿತು.

Body:ನಾಡ ಹಬ್ಬ ದಸರ ೨೦೧೯ ಅನ್ನು ಪ್ರವಾಹದ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲು ತಿರ್ಮಾನಿಸಲಾಗಿದ್ದು ಇದರ ಅಂಗವಾಗಿ ಇಂದು ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯ ಬಳಿ ೬ ಗಜಪಡೆಯ ಮೊದಲ ತಂಡಕ್ಕೆ ಇಂದು ೧೧:೨೦ ಕ್ಕೆ ಅಭಿಜಿನ್ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಬಾರಿ ಮೊದಲು ಲಗ್ನಕ್ಕೆ ಅನುಸಾರವಾಗಿ ಅರಣ್ಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಶಾಸಕ ರಾಮದಾಸ್ ಅವರು ಮೊದಲು ಆನೆಗಳಿಗೆ ಪುಷ್ಪಾರ್ಚನೆ ಮಾಡಿದರು.
ನಂತರ ತಡವಾಗಿ ಆಗಮಿಸಿದ ಸಚಿವ ಆರ್. ಅಶೋಕ್ ಅವರಿಂ ೨ನೇ‌ ಬಾರಿ ಪುಷ್ಪಾರ್ಚನೆ ಮಾಡಿದರು.
ಮೊದಲ ತಂಡದಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ, ಅಭಿಮನ್ಯು, ವಿಜಯ, ವರಲಕ್ಷಿ, ಈಶ್ವರ, ಧನಂಜಯ ಆನೆಗಳು ಆಗಮಿಸಲಿವೆ.
ನಂತರ ೨ನೇ ತಂಡದಲ್ಲಿ ಉಳಿದ ೮ ಆನೆಗಳು ಆಗಮಿಸಲಿವೆ.
ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟ ಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಗಜಪಯಣದಲ್ಲಿ ಭಾಗವಹಿಸಿದ್ದೇನೆ ಮುಂದೆ ಉಸ್ತುವಾರಿ ಸಚಿವ ಆಗುವುದು ದೇವರಿಗೆ ಬಿಟ್ಟ ವಿಚಾರ.‌ ನಾನು ಬೆಂಗಳೂರು ಉಸ್ತುವಾರಿ ಸಚಿವ ಆಗುತ್ತೇನೆ ಎಂದ ಅವರು ನಾಡ ಹಬ್ಬ ದಸರವನ್ನು ಸಾಂಪ್ರದಾಯಿವಾಗಿ ಆಚರಿಸುವ ಬಗ್ಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನಡೆಸಲಾಗುವುದು ಎಂದರು.
ಇನ್ನೂ ಉಳಿದ ರಾಜಕೀಯ ವಿಚಾರಗಳ ಬಗ್ಗೆ ಹೆಚ್ಚಾಗಿ ಮಾತಾನಾಡುವುದಿಲ್ಲ ಇಂದು ಮೈಸೂರು ಜಿಲ್ಲೆಯ ನೆರೆ ಪರಿಸ್ಥಿತಿ ಜಾಗಗಳಿಗೆ ಭೇಟಿ ಕೊಡುತ್ತೇನೆ ಎಂದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.