ಮೈಸೂರು: ರಾಜ್ಯ ಸರ್ಕಾರ ಶನಿವಾರದಿಂದ ನೈಟ್ ಕರ್ಫ್ಯೂ ಜಾರಿ ಮಾಡಿರುವುದರಿಂದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ನಗರವನ್ನು ರೌಂಡ್ಸ್ ಹಾಕಿ, ಬಂದೋಬಸ್ತ್ ವ್ಯವಸ್ಥೆ ಪರಿಶೀಲಿಸಿದರು.
ಕೆ.ಆರ್.ವೃತ್ತದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ನಗರದಲ್ಲಿ ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಕರ್ಫ್ಯೂ ಸಮಯದಲ್ಲಿ ಅನಗತ್ಯ ಸಂಚಾರ ಅಥವಾ ಅಂಗಡಿ ತೆರೆದರೆ ಅಂತವರ ವಿರುದ್ಧ ಎಫ್ಐಆರ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನೈಟ್ ಕರ್ಫ್ಯೂ ಉಲ್ಲಂಘಿಸಿದರೆ ಇದನ್ನು ಗಮನಿಸಲು ಮೂರು ತಂಡಗಳನ್ನು ರಚನೆ ಮಾಡಿದ್ದೇವೆ. ಸದ್ಯದ ಮಟ್ಟಿಗೆ ಜನರ ಸ್ಪಂದನೆ ಉತ್ತಮವಾಗಿದೆ. ಮೈಸೂರಿನಲ್ಲಿರುವ ಪೊಲೀಸರಲ್ಲಿ ಅರ್ಧದಷ್ಟು ಸಿಬ್ಬಂದಿಯನ್ನು ನೈಟ್ ಕರ್ಫ್ಯೂ ಕರ್ತವ್ಯಕ್ಕೆ ಬಳಸಿಕೊಂಡಿದ್ದೇವೆ. ನಗರದ 120 ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಗಮನಿಸಲಾಗುತ್ತಿದೆ. ಗೂಡ್ಸ್ ವಾಹನಗಳಿಗೆ ನಿರ್ಬಂಧ ಹಾಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.