ಮೈಸೂರು : ಸಾಂಸ್ಕೃತಿಕ ನಗರಿಯ ನಂಜರಾಜ ಬಹದ್ದೂರು ಛತ್ರದಲ್ಲಿ ನಡೆದ ಆದಿವಾಸಿಗಳ ಗೆಡ್ಡೆ ಗೆಣಸು ಮೇಳಕ್ಕೆ ರಾಜವಂಶಸ್ಥ ಯದುವೀರ್ ಅವರು ಚಾಲನೆ ನೀಡಿದರು.
ಆದಿವಾಸಿಗಳು ಹಾಗೂ ರಾಜ್ಯದ ವಿವಿಧ ಭಾಗದಿಂದ ಬಂದಿದ್ದ 25ಕ್ಕೂ ಹೆಚ್ಚಿನ ಮಳಿಗೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ರಾಜವಂಶಸ್ಥ ಯದುವೀರ್, ಗೆಡ್ಡೆಗೆಣಸುಗಳು ನಿಸರ್ಗದ ಅಮೂಲ್ಯ ಸಂಪತ್ತು, ಅದನ್ನು ಸಂರಕ್ಷಿಸಬೇಕು. ಇತ್ತೀಚೆಗೆ ನಮ್ಮ ಸಂಪ್ರದಾಯಕ ಆಹಾರ ಪದ್ಧತಿಗಳ ಕಡೆ ಜನರು ಬರುತ್ತಿದ್ದಾರೆ ಎಂದರು.
ಮೇಳದಲ್ಲಿ 98 ಕೆಜಿ ತೂಕದ ನಾಗರ ಕೊನೆ ಗೆಣಸು ಸೇರಿದಂತೆ ವಿವಿಧ ಬಗೆಯ ಗೆಡ್ಡೆ ಗೆಣಸುಗಳನ್ನು ಪ್ರದರ್ಶಿಸಲಾಯಿತು.