ETV Bharat / city

ಪೊಲೀಸರ ಮೇಲೆ ಹಲ್ಲೆ ಮಾಡಿದ್ರೆ ಸುಮ್ಮನಿರಲ್ಲ: ಎಸ್​ಪಿ ರಿಷ್ಯಂತ್ - C.B.Rishyant warning

ಪೊಲೀಸರು ನಿಯಮ ಮೀರಿದಾಗ ದಂಡ ಹಾಕುತ್ತಾರೆ. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ರೆ ಸುಮ್ಮನಿರಲ್ಲ ಎಂದು ಮೈಸೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಖಡಕ್ ವಾರ್ನಿಂಗ್​ ನೀಡಿದ್ದಾರೆ.

C.B.Rishyant  warning
ಸಿ.ಬಿ.ರಿಶ್ಯಂತ್ ಎಚ್ಚರಿಕೆ
author img

By

Published : Apr 7, 2021, 4:50 PM IST

ಮೈಸೂರು: ಸಂಚಾರಿ ಪೊಲೀಸರು ವಾಹನ ತಪಾಸಣೆ ವೇಳೆ ಸಾರ್ವಜನಿಕರು ಹಲ್ಲೆ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಖಡಕ್ ವಾರ್ನಿಂಗ್​ ನೀಡಿದ್ದಾರೆ.

ಸಿ.ಬಿ.ರಿಶ್ಯಂತ್ ಎಚ್ಚರಿಕೆ

ಈ ಬಗ್ಗೆ ಮಾತನಾಡಿರುವ ಅವರು, ಇತ್ತೀಚೆಗೆ ನಗರದ ರಿಂಗ್ ರಸ್ತೆಯಲ್ಲಿ ಪೊಲೀಸರ ಮೇಲಿನ ಹಲ್ಲೆ ವಿಷಯ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಪೊಲೀಸರ ಮೇಲೆ ಹಲ್ಲೆ ಮಾಡಲು ಅವಕಾಶ ಕೊಡುವುದಿಲ್ಲ. ಹಲ್ಲೆ ಮಾಡಿದರೆ ಕಾನೂನಿನ ಪಾಠ ಕಲಿಸಬೇಕಾಗುತ್ತದೆ. ಫೈನ್ ಕಟ್ಟಿಸಿಕೊಳ್ಳುತ್ತಾರೆ ಎಂದು ಯೂಟರ್ನ್ ಹೊಡೆದು ಅಪಘಾತವಾದರೆ ಅದಕ್ಕೆ ಪೊಲೀಸರನ್ನು ಹೊಣೆಗಾರರನ್ನಾಗಿ ಮಾಡಬೇಡಿ. ವಾಹನ ಸವಾರರಲ್ಲಿ ಅಗತ್ಯ ದಾಖಲೆಗಳಿದ್ದರೆ ಯಾಕೆ ಭಯ ಎಂದು ಪ್ರಶ್ನಿಸಿದರು.

ರಸ್ತೆ ಅಪಘಾತ ತಡೆಯಲು ಹಾಗೂ ಅಪಘಾತವಾಗದಂತೆ ಯಾವ ಕ್ರಮ ಕೈಗೊಂಡಿದ್ದಿರಾ ಎಂದು ಪೊಲೀಸ್ ಇಲಾಖೆಗೆ ಪ್ರತಿವರ್ಷ ಸುಪ್ರೀಂಕೋರ್ಟ್ ವರದಿ ಕೇಳುತ್ತದೆ. ಸವಾರರು ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವುದರಿಂದ ಅಪಘಾತವಾಗಿವೆ. ಸರ್ಕಾರ ಕಾನೂನು ಮಾಡುವುದು ಜನರಿಗಾಗಿ, ಅದನ್ನು ಉಲ್ಲಂಘನೆ ಮಾಡಬಾರದು ಎಂದು ತಿಳುವಳಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.