ETV Bharat / city

ಕೊರೊನಾಗೆ ಅರಣ್ಯ ಸಂಚಾರಿ ದಳದ ಕಾನ್ಸ್​ಟೇಬಲ್, ಅರ್ಚಕ ಬಲಿ - mysore corona news

ಮೈಸೂರಿನಲ್ಲಿಂದು ಮಾರಕ ಕೊರೊನಾಗೆ ಇಬ್ಬರು ಬಲಿಯಾಗಿದ್ದು, ಅರಣ್ಯ ಸಂಚಾರಿ ದಳದ ಕಾನ್ಸ್​ಟೇಬಲ್ ಹಾಗೂ ಅರ್ಚಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

covid deaths
ಕೊರೊನಾ
author img

By

Published : Jul 19, 2020, 8:14 PM IST

ಮೈಸೂರು: ಅರಣ್ಯ ಸಂಚಾರಿ ದಳದ ಕಾನ್ಸ್​ಟೇಬಲ್ ಹಾಗೂ ನಂಜನಗೂಡು ತಾಲೂಕಿನ ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕ ವೈರಸ್​ಗೆ ಬಲಿಯಾಗಿದ್ದಾರೆ.

ಕೊರೊನಾ ವಾರಿಯರ್​ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೈಸೂರು ಅರಣ್ಯ ಸಂಚಾರ ದಳದ 49 ವರ್ಷದ ಕಾನ್ಸ್​ಟೇಬಲ್ ಶನಿವಾರ ರಾತ್ರಿ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಮೃತ ಕಾನ್ಸ್​ಟೇಬಲ್ ಈ ಹಿಂದೆ ಮೈಸೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಸಹಾಯಕ ಅರ್ಚಕ ಬಲಿ:

ನಂಜನಗೂಡಿನ ಚಾಮುಂಡೇಶ್ವರಿ ದೇವಸ್ಥಾನದ ಸಹಾಯಕ ಅರ್ಚಕ(59) ಕೊರೊನಾಗೆ ಬಲಿಯಾಗಿದ್ದಾರೆ. ತಾಲೂಕಿನ ನೀಲಕಂಠ ಬಡಾವಣೆ ನಿವಾಸಿಯಾದ ಇವರು, ಸೋಮವಾರ ಕೊರೊನಾ ಪಾಸಿಟಿವ್​ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.