ಮೈಸೂರು: ಸರ್ವೇ ರಿಪೋರ್ಟ್ ಬಳಿಕ ಮೈಸೂರಿನಿಂದ ನಮ್ಮ ತಾಯಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧಾರವಾಗಲಿದೆ. ಎಲ್ಲೆಲ್ಲಿ ಯಾರೆಲ್ಲ ಗೆಲ್ಲಬಹುದು ಎಂಬುದನ್ನು ಪಕ್ಷದ ವರಿಷ್ಠರು ಸರ್ವೇ ಮಾಡುತ್ತಿದ್ದಾರೆ. ಮುಖ್ಯವಾಗಿ ಆ ಕ್ಷೇತ್ರದಲ್ಲಿ ಯಾರು ಗೆಲ್ತಾರೆ ಅನ್ನೋದು ನಿಗದಿಯಾದ ನಂತರ ಮೊದಲ ಪಟ್ಟಿ ತಕ್ಷಣ ರಿಲೀಸ್ ಮಾಡುತ್ತಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ಮೈಸೂರಿನಿಂದ ಹೆಚ್ಡಿಕೆ, ಭವಾನಿ ರೇವಣ್ಣ ಸ್ಪರ್ಧೆ ವಿಚಾರವಾಗಿ ಹುಣಸೂರಿನಲ್ಲಿ ಮಾತನಾಡಿದ ಅವರು, ಶ್ರಮ ಪಡುವವರನ್ನು ಸೆಕೆಂಡ್ ಲಿಸ್ಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಇನ್ನಷ್ಟು ಶ್ರಮ ಪಡಬೇಕು ಅನ್ನೋರನ್ನು ಯಾರನ್ನು ಡಿಪ್ಲಾಯ್ ಮಾಡಬೇಕು, ಯಾರಿಗೆ ಇನ್‌ಚಾರ್ಜ್ ಕೊಡಬೇಕು ಅನ್ನೋರು ಮೂರನೇ ಪಟ್ಟಿಯಲ್ಲಿ ಬರಲಿದ್ದಾರೆ ಎಂದರು.
'ಟೋಪಿ ಬೇಡ': ಇಫ್ತಿಯಾರ್ ಕೂಟದಲ್ಲಿ ಭಾಗಿ ಆದ ವೇಳೆ ಮುಸ್ಲಿಂ ಬಾಂಧವರು ಎರಡೆರಡು ಬಾರಿ ಟೋಪಿ ಹಾಕಲು ಬಂದಾಗ ಪ್ರಜ್ವಲ್ ರೇವಣ್ಣ ಬೇಡ ಎಂದರು. ಇವತ್ತು ಸೋಮವಾರ ನಾನು ನಾನ್‌ವೆಜ್ ತಿನ್ನಲ್ಲ, ನಾಳೆಯಾಗಿದ್ರೆ ತಿನ್ನುತ್ತಿದ್ದೆ ಎಂದು ಹೇಳಿ ಊಟ ಮಾಡದೇ ಹೊರಟರು.
ಇದನ್ನೂ ಓದಿ: ಊರಹಬ್ಬದಲ್ಲಿ ಮಚ್ಚು ಪ್ರದರ್ಶಿಸಿ ಭರ್ಜರಿ ಸ್ಟೆಪ್ಸ್ ಹಾಕಿದ ಮಾಜಿ ಮೇಯರ್: ವಿಡಿಯೋ ವೈರಲ್