ಮೈಸೂರು: ಚಾಮುಂಡೇಶ್ವರಿ ಬೆಟ್ಟದಲ್ಲಿರುವ ಮಹಾಬಲೇಶ್ವರ ರಥಕ್ಕೆ ಆಕ್ಷೇಪಾರ್ಹ ಲಾಂಛನದ ಚಿಹ್ನೆ ಬಿಡಿಸುವ ಮೂಲಕ ಭಕ್ತ ಸಮೂಹದ ಕೆಂಗಣ್ಣಿಗೆ ಗುರಿಯಾಗಿದ್ದ ಪೇಂಟರ್, ಮುಜರಾಯಿ ಅಧಿಕಾರಿಗಳು ಖಡಕ್ ಸೂಚನೆ ನೀಡುತ್ತಿದ್ದಂತೆ ರಥ ಚಕ್ರದ ಬಣ್ಣ ಬದಲಾಯಿಸಿದ್ದಾನೆ.
‘ಈಟಿವಿ ಭಾರತ್' ಈ ಸಂಬಂಧ ‘ಮಹಾಬಲೇಶ್ವರ ರಥಕ್ಕೆ ಆಕ್ಷೇಪಾರ್ಹ ಲಾಂಛನ ಬಿಡಿಸಿದ ಪೇಂಟರ್..!’ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕೂಡಲೇ ರಥ ಚಕ್ರಕ್ಕೆ ಬಳಿದಿರುವ ಬಣ್ಣವನ್ನು ಬದಲಾಯಿಸುವಂತೆ ಸೂಚಿಸಿದ್ದರು. ‘ನಿಮ್ಮ ಗಮನಕ್ಕೆ ಇರಲಿ ಅಂತ ಹಾಕಿದ್ದೇನೆ’, ‘ಚಾಮುಂಡಿ ಬೆಟ್ಟದ ರಥದ ಚಕ್ರಕ್ಕೆ ಮಾಡಿರುವ ಪೇಂಟಿಂಗ್ ನೋಡಿ. ಇಂಥದ್ದನ್ನ ಸಹಿಸಬೇಕಾ ಹೇಳಿ?’ ಎಂದು ಟ್ವೀಟ್ ಮಾಡಿ ಸಂಸದ ಪ್ರತಾಪ್ ಸಿಂಹ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನು ಓದಿ...:ಮಹಾಬಲೇಶ್ವರ ರಥಕ್ಕೆ ಆಕ್ಷೇಪಾರ್ಹ ಲಾಂಛನ ಬಿಡಿಸಿದ ಪೇಂಟರ್..!
ಈಟಿವಿ ಭಾರತ ವರದಿಯಿಂದ ಎಚ್ಚೆತ್ತುಕೊಂಡು ಅಧಿಕಾರಿಗಳು ರಥದ ಆಕ್ಷೇಪಾರ್ಹ ಬಣ್ಣ ಬದಲಿಸಲು ಸೂಚಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ಆಗದಂತೆ ನೋಡಿಕೊಂಡಿದ್ದಾರೆ. ಈಟಿವಿ ಭಾರತ ವರದಿಗೆ ಸ್ಪಂದಿಸಿರುವ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇವೆ. ಇನ್ನೊಮ್ಮೆ ಇಂತಹ ಅಚಾತುರ್ಯಗಳು ನಡೆಯದಂತೆ ಅಧಿಕಾರಿಗಳು ನೋಡಿಕೊಳ್ಳಬೇಕಿದೆ.