ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಐಎಎಸ್ ಪಾಸ್ ಮಾಡಿದ್ದಾರಾ ಎಂಬುದೇ ಡೌಟ್? ಎನ್ನುವ ಮೂಲಕ ಶಾಸಕ ಎಚ್.ಪಿ.ಮಂಜುನಾಥ್ ಪರವಾಗಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರು ಬ್ಯಾಟಿಂಗ್ ಮಾಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಹಿಣಿ ಸಿಂಧೂರಿಗೆ ಬೇಸಿಕ್ ನಾಲೆಡ್ಜ್ (ಕನಿಷ್ಠ ತಿಳಿವಳಿಕೆ) ಇಲ್ಲದ ಐಎಎಸ್ ಅಧಿಕಾರಿ. ಜನಪ್ರತಿನಿಧಿಗಳ ಬಳಿ ಶಿಷ್ಟಾಚಾರದಿಂದ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಅವರಿಗೆ ಗೊತ್ತಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ...‘ಎರಡು ರಾಜ್ಯದ ಸಿಎಂಗಳು ನಿಮ್ಮ ಬೆನ್ನಿಗಿದ್ದಾರೋ, ಕಾಲು ಕೆಳಗಿದ್ದಾರೋ ಗೊತ್ತಿಲ್ಲ'
ಶಾಸಕಾಂಗ ಶಾಸನ ರೂಪಿಸುತ್ತದೆ. ಶಾಸನಗಳನ್ನು ಕಾರ್ಯರೂಪಕ್ಕೆ ತರುವುದು ಕಾರ್ಯಾಂಗದ ಕೆಲಸ, ಇದು ಆಗದಿದ್ದಲ್ಲಿ ನ್ಯಾಯಾಂಗಕ್ಕೆ ಹೋಗಬೇಕು. ಸಂವಿಧಾನದ ಈ ಮೂರು ಅಂಗಗಳನ್ನು ಡಿಸಿ ಮರೆತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರಿಗೆ ಪತ್ರ ತಲುಪುವ ಮುನ್ನವೇ ಸೋಷಿಯಲ್ ಮಿಡಿಯಾಗೆ ಹೇಗೆ ಹೋಯಿತು? ನಿಮ್ಮ ಕಚೇರಿಯ ಸಿಬ್ಬಂದಿಯಿಂದ ಹೋಯಿತೇ? ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಕೂಡಲೇ ಶಾಸಕರ ಬಳಿ ಕ್ಷಮೆ ಕೇಳಬೇಕು. ಇನ್ನು ಮೂರು ದಿನದಲ್ಲಿ ಕ್ಷಮೆ ಕೇಳದಿದ್ದರೆ, ಹಕ್ಕುಚ್ಯುತಿ ಮಂಡನೆ ಮಾಡ್ತೇನಿ. ಈ ಘಟನೆಯಿಂದ ಮಂಜುನಾಥ್ ಅವರಿಗೆ ಆದ ಅಪಮಾನವಲ್ಲ, ಶಾಸಕರಿಗೆ ಆದ ಅಪಮಾನ ಎಂದು ಕಿಡಿಕಾರಿದರು.
ಕೌನ್ಸಿಲಿಂಗ್ ಗ್ಗೆ ಬಂದು ಉತ್ತರ ಕೊಡಲಿ, ಜನಪ್ರತಿನಿಧಿಗಳು ಅಂದರೆ ಕಡೆಗಣಿಸೋದು ಎಂದುಕೊಡಿದ್ದೀರಾ? ನಾನು ಅಲ್ಲಿ ಉತ್ತರ ಕೊಡುತ್ತೇನೆ ಬನ್ನಿ ಎಂದರು.
ವಿಧಾನ ಪರಿಷತ್ ಸದಸ್ಯ ಧರ್ಮಸೇನಾ ಮಾತನಾಡಿ, ಈ ಡಿಸಿ ಬಂದ ಮೇಲೆ ವಿಧಾನ ಪರಿಷತ್ ಸದಸ್ಯರಿಗೆ ಗೌರವ ಇಲ್ಲದಂತಾಗಿದೆ. ದಸರಾದ ಯಾವುದೇ ಸಭೆಗಳಿಗೆ ನಮಗೆ ಆಹ್ವಾನ ಕೊಟ್ಟಿಲ್ಲ ಎಂದು ಅಸಮಾಧಾನ ಹೊರಹಾಕಿದರು. ರಾಷ್ಟ್ರಪತಿಗಳು, ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು. ಶಾಸಕರ ಹಕ್ಕು ಚ್ಯುತಿ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.