ETV Bharat / city

ಬೇಡದ ವಿಚಾರಗಳಲ್ಲಿ ಮೂಗು ತೂರಿಸಲು ಸರ್ಕಾರಕ್ಕೆ ಪ್ರಚಾರದ ಹುಚ್ಚಿಲ್ಲ.. ಎಲ್ಲ ಆರೋಪಗಳಿಗೂ ಉತ್ತರ ಕೊಡಲು ಸಿದ್ಧ.. ಸಚಿವ ಕೋಟ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಿಜಾಬ್ ಸೇರಿದಂತೆ ಎಲ್ಲಾ ಪ್ರಕರಣಗಳನ್ನ ಕಾನೂನು ಚೌಕಟ್ಟಿನಲ್ಲೇ ಬಗೆಹರಿಸಿದೆ. ಸರ್ಕಾರ ಜನರ ಭಾವನೆಯನ್ನ ಅರ್ಥಮಾಡಿಕೊಂಡು ಕೆಲಸ ಮಾಡುತ್ತಿದೆ..

minister Kota Srinivas Poojary
ಸಚಿವ ಕೋಟ ಶ್ರೀನಿವಾಸ ಪೂಜಾರಿ
author img

By

Published : Apr 8, 2022, 11:58 AM IST

ಮೈಸೂರು : ಆರ್​​ಎಸ್​​ಎಸ್ ಅ​ನ್ನು ಅಲ್ ಖೈದಾಗೆ ಕಾಂಗ್ರೆಸ್ ಹೋಲಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಯಾರಿಗೂ ಆತಂಕ ಬೇಡ. ಎಲ್ಲಾ ಆರೋಪಗಳಿಗೂ ಉತ್ತರ ಕೊಡಲು ಬಿಜೆಪಿ ಸರ್ಕಾರ ಸಿದ್ದವಿದೆ ಎಂದು ಹೇಳಿದರು.

ಆರ್​​ಎಸ್​​ಎಸ್ ಅನ್ನು ಅಲ್ ಖೈದಾಗೆ ಹೋಲಿಕೆ ವಿಚಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿರುವುದು..

ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನವರು ಯಾವಾಗ ಬಿಜೆಪಿಯನ್ನ ಹೊಗಳಿದ್ದಾರೆ‌?. ಸಿದ್ದರಾಮಯ್ಯ, ಡಿ.ಕೆ‌ ಶಿವಕುಮಾರ್ ಯಾವಾಗಲೂ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ ಎಂದು ಹೇಳಿಲ್ಲ. ಬೊಮ್ಮಾಯಿಯವರ ಸರ್ಕಾರ ಸರ್ವರಿಗೂ ನ್ಯಾಯ ಕೊಡುವ ದಿಕ್ಕಿನಲ್ಲಿ ಕಠಿಣ ಕಾನೂನು ಸುವ್ಯವಸ್ಥೆಯನ್ನ ಕಾಪಾಡಿಕೊಂಡು ಬಂದಿದೆ ಎಂದರು.

ಹಿಜಾಬ್ ಸೇರಿದಂತೆ ಎಲ್ಲಾ ಪ್ರಕರಣಗಳನ್ನ ಕಾನೂನು ಚೌಕಟ್ಟಿನಲ್ಲೇ ಬಗೆಹರಿಸಿದೆ. ಸರ್ಕಾರ ಜನರ ಭಾವನೆಯನ್ನ ಅರ್ಥಮಾಡಿಕೊಂಡು ಕೆಲಸ ಮಾಡುತ್ತಿದೆ. ಬೇಡದ ವಿಚಾರಗಳಲ್ಲಿ ಮೂಗು ತೂರಿಸಲು ಸರ್ಕಾರಕ್ಕೆ ಪ್ರಚಾರದ ಹುಚ್ಚಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇದನ್ನೂ ಓದಿ: ಅಲ್‌ಖೈದಾ ವಿಡಿಯೋ ಬಗ್ಗೆ ಪೊಲೀಸ್​​ ತನಿಖೆಗೆ ಸೂಚನೆ: ಸಿಎಂ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.