ETV Bharat / city

ದಲಿತ ಸಿಎಂ ಕೂಗು ಹಾಕುವಷ್ಟು ಶಕ್ತಿ ನಮ್ಮ ಸಮುದಾಯದಲ್ಲಿ ಬರಬೇಕು.. ಕೇಂದ್ರ ಸಚಿವ ಎ ನಾರಾಯಣಸ್ವಾಮಿ

ದಲಿತ ಸಿಎಂ ಬೇಡಿಕೆ ವಿಚಾರವಾಗಿ ಸಚಿವ ಎ. ನಾರಾಯಣಸ್ವಾಮಿ‌ ಪ್ರತಿಕ್ರಿಯಿಸಿದ್ದಾರೆ. ಮೊದಲು ನಮ್ಮ ಸಮಾಜದಲ್ಲಿ ಆ ಶಕ್ತಿ ಬರಬೇಕು. ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಜನರ ಹೇಳಿಕೆ ಎಂದು ಹೇಳಲಾಗುವುದಿಲ್ಲ ಎಂದಿದ್ದಾರೆ..

author img

By

Published : Oct 3, 2021, 7:09 PM IST

minister a narayanaswamy
ಸಚಿವ ಎ ನಾರಾಯಣಸ್ವಾಮಿ‌

ಮೈಸೂರು : ಮೊದಲು ನಮ್ಮ ಸಮಾಜದಲ್ಲಿ ರಾಜ್ಯದಲ್ಲಿ ದಲಿತ ಸಿಎಂ ಕೂಗು ಹಾಕುವಷ್ಟು ಶಕ್ತಿ ಬರಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ‌ ತಿಳಿಸಿದರು.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದು ನಂತರ ಮಾಧ್ಯಮಗಳೊಂದಿಗೆ‌ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತ ಸಿಎಂ ಕೂಗಿನ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಅವಲೋಕನ ಆಗಬೇಕಿತ್ತು ಎಂದರು.

ಸುತ್ತೂರು ಶ್ರೀಗಳಿಂದ ಆಶೀರ್ವಾದ ಪಡೆದ ಬಳಿಕ ಸಚಿವ ಎ ನಾರಾಯಣಸ್ವಾಮಿ‌ ಮಾತನಾಡಿರುವುದು..

ಒಬ್ಬ ವ್ಯಕ್ತಿಯ ಹೇಳಿಕೆ ಜನರ ಹೇಳಿಕೆಯಾ?

ಜಾತಿಗಣತಿ ಜಾರಿ ವಿಚಾರವಾಗಿ ಮಾತನಾಡಿ, ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಜನರ ಹೇಳಿಕೆ ಎಂದು ಹೇಳಲಾಗುವುದಿಲ್ಲ. ಸಿದ್ದರಾಮಯ್ಯ ಹೊರತುಪಡಿಸಿ ಬೇರೆ ಯಾರಾದರೂ ಜಾತಿಗಣತಿ ಬಗ್ಗೆ ಮಾತನಾಡಿದ್ದಾರಾ? ಸಾರ್ವಜನಿಕವಾಗಿ ಎಲ್ಲಾದರೂ ಈ ಬಗ್ಗೆ ಚರ್ಚೆಯಾಗಿದೆಯಾ? ಒಬ್ಬ ವ್ಯಕ್ತಿಯ ಬೇಡಿಕೆಯನ್ನು ಬೇಡಿಕೆ ಎನ್ನಲಾಗುತ್ತದೆಯಾ ಎಂದು ಪ್ರಶ್ನಿಸಿದರು.

ಜಾತಿಗಣತಿಗಾಗಿ ಸಿದ್ದರಾಮಯ್ಯ ಸರ್ಕಾರ 180 ಕೋಟಿ ರೂ. ಹಣ ಖರ್ಚು ಮಾಡಿದೆ. ಜನರ ತೆರಿಗೆ ಹಣ ಖರ್ಚು ಮಾಡಿರುವವರು ಜವಾಬ್ದಾರಿ ಹೊತ್ತುಕೊಂಡು, ಜಾತಿ ಗಣತಿ ವರದಿ ಮಂಡನೆ ಮಾಡಬೇಕಿತ್ತು.

ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಯಲ್ಲಿರುವಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ, ನ್ಯಾಯ ಸಮ್ಮತವಾಗಿ ವರದಿ ಮಂಡನೆ ಮಾಡಬೇಕಿತ್ತು. ಒಂದು ಸೂಕ್ಷ್ಮ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ಸಿದ್ದರಾಮಯ್ಯ ಬಿಡಬೇಕು ಎಂದರು.

ಅಫಿಡೆವಿಟ್ ಸಲ್ಲಿಸಿಲ್ಲ : ಜಾತಿಗಣತಿ ಬಹಿರಂಗಪಡಿಸದಂತೆ ನಾವು ಎಲ್ಲೂ ಸ್ಟೇಟ್​ಮೆಂಟ್ ಅಫಿಡೆವಿಟ್ ಸಲ್ಲಿಸಿಲ್ಲ. ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಸಮಿತಿ ರಚಿಸಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.