ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆರ್ಬಿಐನ ನೋಟು ಮುದ್ರಣಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಧರೆಗೆ ದೊಡ್ಡವರು ಉತ್ಸವ-2ರ ಮಂಟೇಸ್ವಾಮಿ, ಮಾದೇಶ್ವರನ ಕಾವ್ಯ ಗಾನಯಾನಕ್ಕೆ ಧೂಪ ಹಾಕುವ ಮೂಲಕ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾದೇಶ್ವರನ ಭಕ್ತ ಸಮೂಹ ಉಘೇ ಉಘೇ ಎಂದು ಘೋಷಣೆ ಕೂಗಿ ಸಾಂಸ್ಕೃತಿಕ ಗೀತಾ ಗಾಯನಗಳು ಪ್ರಾರಂಭವಾದವು. ಇನ್ನು ಈ ಕಾರ್ಯಕ್ರಮಕ್ಕೆ ನೆರೆ ಹೊರೆ ಜಿಲ್ಲೆಗಳ ಜನ ಹಾಗೂ ನಗರದ ಜನರು ಬಂದು ಅಹೋರಾತ್ರಿ ನಿಂತು ಆಲಿಸಿದ್ದು ಬಹಳ ವಿಶೇಷವಾಗಿತ್ತು. ಅಲ್ಲದೆ ಬಂದ ಜನರಿಗೆ ರಾತ್ರಿ ಊಟದ ವ್ಯವಸ್ಥೆಯೂ ಸಹ ಮಾಡಲಾಗಿತ್ತು. ಕಲಾವಿದರು ಬೇರೆ ಬೇರೆ ಊರುಗಳಿಂದ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.