ETV Bharat / city

ಅನಂತ್ ಕುಮಾರ್​ ಹೆಗಡೆ ಒಬ್ಬ ಹುಚ್ಚುಚ್ಚಾಗಿ ಮಾತ್ನಾಡೋ ಸಂಸದ: ಮಂಜುಳ ಮಾನಸ

ಸಂಸದ ಅನಂತ್‌ ಕುಮಾರ್ ಹೆಗಡೆ ಹುಚ್ಚನ ರೀತಿ ಮಾತನಾಡುತ್ತಿದ್ದಾರೆ. ಅವನೊಬ್ಬ ಹುಚ್ಚುಹುಚ್ಚಾಗಿ ಮಾತನಾಡುವ ಸಂಸದ ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ ಆಕ್ರೋಶ ವ್ಯಕ್ತಪಡಿಸಿದ್ದಾರೆ.

author img

By

Published : Feb 7, 2020, 8:56 PM IST

Updated : Feb 7, 2020, 11:53 PM IST

manjula-manasa-reaction-on-anathkumar-hegde-statement
ಮೈಸೂರು ಕಾಂಗ್ರೆಸ್​ ಸುದ್ದಿಗೋಷ್ಠಿ

ಮೈಸೂರು: ಮಹಾತ್ಮ ಗಾಂಧೀಜಿಯವರ ವಿರುದ್ಧ ಮಾತನಾಡುವವರನ್ನು ನಿಮಾನ್ಸ್ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲು ಬಿಜೆಪಿ ಪಕ್ಷಕ್ಕೆ ದುಡ್ಡು ಕೊಡಲು ಆಗಲಿಲ್ಲವಾದರೆ ಹೇಳಿ ಕಾಂಗ್ರೆಸ್ ಪಕ್ಷ ನೀಡುತ್ತೆ ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ ಕಿಡಿಕಾರಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಂಸದ ಅನಂತಕುಮಾರ್ ಹೆಗಡೆ ಹುಚ್ಚನ ರೀತಿ ಮಾತನಾಡುತ್ತಿದ್ದಾರೆ. ಅವನೊಬ್ಬ ಹುಚ್ಚುಹುಚ್ಚಾಗಿ ಮಾತನಾಡುವ ಸಂಸದ. ‌ಹೆಗಡೆ ಸೇರಿದಂತೆ ಅನೇಕ ಬಿಜೆಪಿಗರು ಮಹಾತ್ಮ ಗಾಂಧೀಜಿ ಅವರ ಬಗ್ಗೆ ಮಾತನಾಡಿದ್ದಾರೆ‌‌. ಇತಿಹಾಸ ತಿಳಿಯದೇ ಏನೇನೋ ಮಾತನಾಡುತ್ತಾರೆ‌. ‌ಮೊದಲು ಇಂತವರನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕಿದೆ ಎಂದು ಹೇಳಿದರು.

ಮೈಸೂರು ಕಾಂಗ್ರೆಸ್​ ಸುದ್ದಿಗೋಷ್ಠಿ

ಪಕ್ಷದ ಜಿಲ್ಲಾಧ್ಯಕ್ಷ ಡಾ. ಬಿ. ಜೆ. ವಿಜಯಕುಮಾರ್ ಮಾತನಾಡಿ, ಸಂವಿಧಾನ ಹಾಗೂ ಮಹಾತ್ಮರ ಬಗ್ಗೆ ಸಂಸದ ಅನಂತ್ ಕುಮಾರ್​ ಹೆಗಡೆ ನೀಡಿರುವ ಪ್ರಚೋದನಕಾರಿ ಹೇಳಿಕೆ ವಿರುದ್ಧ ನಾಳೆ ಕಾಂಗ್ರೆಸ್ ನಿಯೋಗದಿಂದ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ, ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಪ್ರಯೋಜನವಿಲ್ಲ‌. ‌ಕಾರ್ಪೋರೇಟರ್​​ ಸೆಕ್ಟರ್​ಗೆ ಅನುಕೂಲವಾಗಲಿದೆ ಎಂದು ಟೀಕಿಸಿದರು.

Last Updated : Feb 7, 2020, 11:53 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.