ETV Bharat / city

ಮೈಸೂರಿನಲ್ಲಿ ಎರಡು ಪ್ರತ್ಯೇಕ ಕಾಡಾನೆ ದಾಳಿ ಪ್ರಕರಣ: ಒಬ್ಬನ ಸಾವು, ಮನೆ ಜಖಂ!

author img

By

Published : Feb 3, 2022, 11:42 AM IST

ಮೈಸೂರಿನಲ್ಲಿ ಎರಡು ಪ್ರತ್ಯೇಕ ಕಾಡಾನೆ ದಾಳಿ ಪ್ರಕರಣದಲ್ಲಿ, ಓರ್ವ ಸಾವನ್ನಪ್ಪಿದ್ದರೆ, ಮನೆಯೊಂದರ ಮುಂಭಾಗ ಜಖಂಗೊಂಡಿದೆ.

wild elephant attack in mysore
ಮೈಸೂರಿನಲ್ಲಿ ಕಾಡಾನೆ ದಾಳಿ

ಮೈಸೂರು: ಹಸುಗಳಿಗೆ ಮೇವು ತರಲು ಹೋಗಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವೀರನಹೊಸಹಳ್ಳಿಯ ಅರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮ ಕೊಳವಿಗೆಯಲ್ಲಿ ನಡೆದಿದೆ.

ವ್ಯಕ್ತಿ ಸಾವು: ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಕೊಳವಿಗೆಯಲ್ಲಿ ಈ ಘಟನೆ ನಡೆದಿದೆ. ರೈತ ರಾಜೇಶ್ ಎಂಬುವವರು ಕಳೆದ ರಾತ್ರಿ ಸುಮಾರು 10:30ರ ಸಮಯದಲ್ಲಿ ಹಸುವಿಗೆ ಹಿಂಭಾಗದ ಹಿತ್ತಲಿನಿಂದ ಹುಲ್ಲು ತರಲು ಹೋದಾಗ ಕಾಡಾನೆ ದಾಳಿ ಮಾಡಿದ್ದು, ರಾಜೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಇಂಜಿನಿಯರ್ ಅಪಹರಣ ಪ್ರಕರಣ: ಮೂರು ಗಂಟೆಯಲ್ಲೇ 6 ಮಂದಿ ಬಂಧನ

ಮತ್ತೊಂದು ಘಟನೆ: ಇಂದು ಬೆಳಗಿನ ಜಾವ ವೀರನಹೊಸಹಳ್ಳಿ ವ್ಯಾಪ್ತಿಯ ಕಾಡಂಚಿನ ಗ್ರಾಮ ನಾಗಪುರ ಹಾಡಿಯಲ್ಲಿ ಒಂಟಿ ಸಲಗವೊಂದು ರಾಜು ಎಂಬುವವರ ಮನೆಯ ಮುಂಭಾಗವನ್ನು ಜಖಂ ಮಾಡಿದ್ದು, ಮನೆಯೊಳಗೆ ಇದ್ದ ಕುಟುಂಬ ಭಯಭೀತವಾಗಿದೆ. ದಾಳಿ ಮಾಡಿದ ಒಂಟಿ ಸಲಗ ಜಮೀನಿನಲ್ಲಿ ಬೆಳೆದ ಫಲಸನ್ನು ಸಹ ನಾಶ ಮಾಡಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕಾಡಂಚಿನ ಗ್ರಾಮಗಳಿಗೆ ಕಾಡು ಪ್ರಾಣಿಗಳು ಬರದಂತೆ ಗೇಟ್ ಅಳವಡಿಸಿದ್ದರೂ, ಅವುಗಳ ನಿರ್ವಹಣೆ ಸರಿಯಾಗಿ ಮಾಡದೇ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.