ETV Bharat / city

ಎಂಥಾ ಐನಾತಿ ಕಣ್ರೀ ಇವ್ನು.. ₹5 ಕೋಟಿ‌ ಮರಣ ವಿಮೆ ಮಾಡಿಸಿ, ಹಣ ಪಡೆಯಲು ಸತ್ತಂತೆ ದಾಖಲೆ ಸೃಷ್ಟಿಸಿದ್ದ.. ಮುಂದೆ ಹಿಂಗಾಯ್ತು.. - ಮೈಸೂರಿನಲ್ಲಿ ನಕಲಿ ಮರಣ ಪತ್ರ ಸೃಷ್ಟಿ

ಖಾಸಗಿ ಬ್ಯಾಂಕ್ ಹಾಗೂ ವಿಮಾ ಕಂಪನಿಗಳು ಹಣ ನೀಡುವ ಪ್ರಕ್ರಿಯೆ ಆರಂಭಿಸಿ, ಹಣ ನೀಡಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಯುವಕನ ತಾಯಿಯ ಸಹಿ ಹಾಗೂ ಬ್ಯಾಂಕ್ ವಿವರ ಪಡೆದು ಇನ್ನೆರಡು ಮೂರು ದಿನಗಳಲ್ಲಿ ವಿಮೆಯ ಹಣದ ಚೆಕ್ ನೀಡಲು ನಿರ್ಧಾರ ಮಾಡಿದ್ದಾರೆ. ಅಷ್ಟರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ವಿಮಾ ಕಂಪನಿಗೆ ಕರೆ ಮಾಡಿ, ನೀವು ಹಣ ನೀಡಲಿರುವ ವ್ಯಕ್ತಿ ಬದುಕಿದ್ದಾನೆ ಎಂದು ಹೇಳಿದ್ದಾರೆ..

man created Death Certificate to get death insurance fund in Mysore
ಮೈಸೂರಿನಲ್ಲಿ ವಂಚನೆ ಪ್ರಕರಣ ದಾಖಲು
author img

By

Published : Jan 28, 2022, 5:40 PM IST

ಮೈಸೂರು : ಯುವಕನೊಬ್ಬ ತಾನು ಬೇಗ ಶ್ರೀಮಂತನಾಗಬೇಕೆಂಬ ಆಸೆಯಿಂದ ಖಾಸಗಿ ವಿಮಾ ಕಂಪನಿಗಳಲ್ಲಿ 5 ಕೋಟಿ ರೂ.ನ ಮರಣ ವಿಮೆ ಮಾಡಿಸಿ, ನಕಲಿ ಮರಣ ಪ್ರಮಾಣ ಪತ್ರ ಪಡೆದು ವಿಮೆ ಹಣಕ್ಕೆ ಅರ್ಜಿ ಸಲ್ಲಿಸಿ ಸಿಕ್ಕಿಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿದ ವ್ಯಕ್ತಿ ಮೂಲತಃ ಉಡುಪಿಯವನಾಗಿದ್ದಾನೆ. ಮೈಸೂರು ಹಾಗೂ ಬೆಂಗಳೂರಿನಲ್ಲಿದ್ದುಕೊಂಡು, ಸಾಮಾಜಿಕ ಜಾಲತಾಣದಲ್ಲಿ ಚಾನಲ್ ಒಂದನ್ನು ನಡೆಸುತ್ತಿದ್ದಾನೆ ಎನ್ನಲಾಗಿದೆ. ಜೊತೆಗೆ ಈತ ಸಾಮಾಜಿಕ ಚಟುವಟಿಕೆಗಳಲ್ಲೂ ಆಗಾಗ ಕಾಣಿಸಿಕೊಳ್ಳುತ್ತಿದ್ದ.

ಈತನಿಗೆ ಶ್ರೀಮಂತನಾಗಬೇಕೆಂಬ ಆಸೆಯಿದ್ದು, ಈ ಬಗ್ಗೆ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಾನೆ. ನಂತರ ಅವನಿಗೆ ಮರಣ ವಿಮೆ ಮೂಲಕ ಹಣ ಪಡೆಯುವ ಯೋಚನೆ ಹುಟ್ಟಿಕೊಂಡಿದೆ. ನಂತರ ತಾನೇ ಸತ್ತಂತೆ ನಾಟಕವಾಡಿ ತನ್ನ ತಾಯಿಯ ಸಹಾಯ ಪಡೆದು ಅವರಿಂದ ನಕಲಿ ಮರಣ ಪ್ರಮಾಣ ಪತ್ರವನ್ನು ಸೃಷ್ಟಿಸಿ ವಿಮೆ ಹಣ ಪಡೆಯಲು ಅರ್ಜಿ ಸಲ್ಲಿಸಿ ಕೊನೆಯಲ್ಲಿ ಸಿಕ್ಕಿಬಿದ್ದಿದ್ದಾನೆ.

ಈತ ಖಾಸಗಿ ವಿಮಾ ಕಂಪನಿಗಳೆರಡರಲ್ಲಿ 5 ಕೋಟಿ ರೂ. ಮೌಲ್ಯದ ಮರಣ ವಿಮೆ ಮಾಡಿಸಿ, ಕೆಲ ದಿನಗಳ ನಂತರ ತನ್ನ ತಾಯಿಯ ಬಳಿ ಈ ವಿಚಾರ ತಿಳಿಸಿ ಅವರ ಸಹಾಯ ಪಡೆದಿದ್ದಾನೆ. ತಾನು ಸತ್ತು ಹೋಗಿರುವಂತೆ ದಾಖಲೆಗಳನ್ನು ಸೃಷ್ಟಿಸಿಕೊಡುತ್ತೇನೆ, ಅದನ್ನು ಸ್ಥಳೀಯ ಪಂಚಾಯತ್‌ನಲ್ಲಿ ಸಲ್ಲಿಸಿ ಮರಣ ಪತ್ರ ಪಡೆದುಕೊಳ್ಳಿ ಎಂದು ಹೇಳಿದ್ದಾನೆ.

ಅದರಂತೆ ಆತನ ತಾಯಿಯು ಒಪ್ಪಿಗೆ ನೀಡಿದ್ದಾರೆ. ನಂತರ ಆತ ಹೃದಯಾಘಾತದಿಂದ ಮೃತಪಟ್ಟಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಟ್ಟಿದ್ದಾನೆ. ಅವರ ತಾಯಿ ಆ ದಾಖಲೆಯನ್ನು ಪಂಚಾಯತ್‌ಗೆ ಸಲ್ಲಿಸಿ ಮರಣ ಪ್ರಮಾಣ ಪತ್ರ ಪಡೆದು ಖಾಸಗಿ ವಿಮೆ ಕಂಪನಿಗಳಿಗೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಪುಟ್ಟ ಮಗುವಿದ್ರೂ ಮಾಜಿ ಸಿಎಂ ಬಿಎಸ್​ವೈ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?

ಖಾಸಗಿ ಬ್ಯಾಂಕ್ ಹಾಗೂ ವಿಮಾ ಕಂಪನಿಗಳು ಹಣ ನೀಡುವ ಪ್ರಕ್ರಿಯೆ ಆರಂಭಿಸಿ, ಹಣ ನೀಡಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಯುವಕನ ತಾಯಿಯ ಸಹಿ ಹಾಗೂ ಬ್ಯಾಂಕ್ ವಿವರ ಪಡೆದು ಇನ್ನೆರಡು ಮೂರು ದಿನಗಳಲ್ಲಿ ವಿಮೆಯ ಹಣದ ಚೆಕ್ ನೀಡಲು ನಿರ್ಧಾರ ಮಾಡಿದ್ದಾರೆ. ಅಷ್ಟರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ವಿಮಾ ಕಂಪನಿಗೆ ಕರೆ ಮಾಡಿ, ನೀವು ಹಣ ನೀಡಲಿರುವ ವ್ಯಕ್ತಿ ಬದುಕಿದ್ದಾನೆ ಎಂದು ಹೇಳಿದ್ದಾರೆ.

ಈ ವಿಷಯ ಕೇಳಿ ಬ್ಯಾಂಕ್ ಅಧಿಕಾರಿಗಳು ಶಾಕ್ ಆಗಿದ್ದಾರೆ. ನಂತರ ಮರಣ ಪ್ರಮಾಣ ಪತ್ರ ಮಾಡಿಕೊಟ್ಟ ಪಂಚಾಯತ್‌ನವರಿಗೆ ಕರೆ ಮಾಡಿ ಮರಣ ಪತ್ರದ ಬಗ್ಗೆ ವಿವರ ಕೇಳಿದ್ದಾರೆ‌. ಅವರು ಸಹ ಮರಣ ಪತ್ರ ಪಡೆದ ವ್ಯಕ್ತಿ ಬದುಕಿರುವ ವಿಷಯ ತಿಳಿದು ಹೌಹಾರಿದ್ದಾರೆ. ನಂತರ ಮೇಲಧಿಕಾರಿಗಳಿಗೆ ವಿಷಯ ತಿಳಿಸಿ ಮರಣ ಪ್ರಮಾಣ ಪತ್ರವನ್ನು ರದ್ದುಗೊಳಿಸಿದ್ದಾರೆ.

ಈ ಪ್ರಕರಣ ಸಂಬಂಧ ವಿಮಾ ಕಂಪನಿಯವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಹಣ ಪಡೆಯಲು ಯತ್ನಿಸಿದ ಯುವಕ ಹಾಗೂ ಆತನ ತಾಯಿಯ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.