ETV Bharat / city

ಕಪಿಲಾ ನದಿಗೆ‌ ತಳ್ಳಿ ಪತ್ನಿಯನ್ನು ಕೊಲೆಗೈದ ಪಾಪಿ ಪತಿ ಅಂದರ್​​!

ನಿನ್ನೆ ಪತ್ನಿಯನ್ನು ಕಪಿಲಾ ನದಿಗೆ ತಳ್ಳಿ ಕೊಲೆ ಮಾಡಿದ ಕುಡುಕ ಪತಿಯನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ..

Mysore murder case
ಮೈಸೂರು ಕೊಲೆ ಪ್ರಕರಣ
author img

By

Published : Dec 15, 2021, 1:42 PM IST

ಮೈಸೂರು : ಮಂಗಳವಾರದಂದು ದೇವಾಲಯಕ್ಕೆ ಹೋಗೋಣವೆಂದು ಪತ್ನಿಯನ್ನು ಕರೆದುಕೊಂಡು ಬಂದು ಕಪಿಲಾ ನದಿಗೆ ತಳ್ಳಿ ಕೊಲೆ ಮಾಡಿದ ಕುಡುಕ ಪತಿಯನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.

man arrested under murder case at Mysore
ಪತ್ನಿಯನ್ನು ಕೊಲೆಗೈದ ಗಂಡ ಅರೆಸ್ಟ್

ನಂಜನಗೂಡು ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯ ಸಮೀಪ ಕಪಿಲಾ ನದಿಗೆ ತನ್ನ ಪತ್ನಿ ದೇವಿ (28)ಯನ್ನು ತಳ್ಳಿ ಕೊಲೆ ಮಾಡಿದ್ದಾನೆ. ಮುದ್ದಹಳ್ಳಿ ಗ್ರಾಮದ ರಾಜೇಶ್ ಕೊಲೆ ಮಾಡಿದ ಆರೋಪಿ(ಪತಿ). ಇವರಿಗೆ ಇಬ್ಬರು ಮಕ್ಕಳಿದ್ದು, ಮಕ್ಕಳನ್ನು ಕೂಡ ಸಾಯಿಸಲು ಪ್ರಯತ್ನಿಸಿದ ವೇಳೆ ಮೀನುಗಾರರು ರಕ್ಷಿಸಿದ್ದಾರೆ.

ನಡೆದದ್ದೇನು? : ನಿನ್ನೆ ಗ್ರಾಮದಿಂದ ನಂಜನಗೂಡು ಪಟ್ಟಣದ ಸ್ಕ್ಯಾನಿಂಗ್ ಸೆಂಟರ್​ಗೆ ಆರೋಪಿ ರಾಜೇಶ್, ಪತ್ನಿ ದೇವಿ ಮತ್ತು ಮಕ್ಕಳು ಆಗಮಿಸಿದ್ದರು.

ಈ ವೇಳೆ ದೇವಾಲಯಕ್ಕೆ ಹೋಗೋಣ ಬಾ ಎಂದು ಕರೆದೊಯ್ದು, ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕಪಿಲಾ ನದಿಗೆ ತಳ್ಳಿ ಕೊಲೆಗೈದಿದ್ದಾನೆ. ತನ್ನಿಬ್ಬರು ಮಕ್ಕಳನ್ನು ಕೂಡ ನದಿಯಲ್ಲಿ ಮುಳುಗಿಸಿ ಸಾಯಿಸಲು ಮುಂದಾದ ವೇಳೆ ಮೀನುಗಾರರು ತಡೆದು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಮೈಸೂರು : ಗುಜರಾತ್‌ನ ಪುನರ್ವಸತಿ ಕೇಂದ್ರಕ್ಕೆ ಅರಮನೆಯ 4 ಸಾಕಾನೆಗಳ ಸ್ಥಳಾಂತರ

ಘಟನೆ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಶವವನ್ನು ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.