ETV Bharat / city

ಮೈಸೂರು ವಾರಿಯರ್ಸ್ ಆಲ್ರೌಂಡರ್ ತಂಡ: ಕ್ಯಾಪ್ಟನ್‌ ಕರುಣ್ ನಾಯರ್ ಮೆಚ್ಚುಗೆ - ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ

ಆಗಸ್ಟ್​ 7ರಿಂದ ಮಹಾರಾಜ ಕಪ್ ಕ್ರಿಕೆಟ್ ಆರಂಭವಾಗಲಿದೆ. ಪಂದ್ಯಗಳು ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿವೆ.

maharaja-t-20-cricket
ಮಹಾರಾಜ ಕಪ್
author img

By

Published : Aug 5, 2022, 4:44 PM IST

ಮೈಸೂರು: ಮಹಾರಾಜ ಕ್ರಿಕೆಟ್ ಟ್ರೋಫಿಯಲ್ಲಿ ಆಡುವ ಮೈಸೂರು ವಾರಿಯರ್ಸ್ ತಂಡ ಆಲ್ರೌಂಡರ್ ಟೀಮ್ ಆಗಿದೆ ಎಂದು ತಂಡದ ನಾಯಕ ಕರುಣ್ ನಾಯರ್ ಪ್ರತಿಕ್ರಿಯಿಸಿದರು. ಖಾಸಗಿ ಹೋಟೆಲ್​ನಲ್ಲಿ ತಂಡದ ಆಟಗಾರರ ಪರಿಚಯ ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ, "ಈ ಟೀಂ ಚೆನ್ನಾಗಿದೆ. ಇದರ ಭಾಗವಾಗಿರುವುದಕ್ಕೆ ಸಂತೋಷವಾಗುತ್ತದೆ. ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಎಲ್ಲಾ ರೀತಿಯಲ್ಲೂ ತಂಡ ಉತ್ತಮವಾಗಿದೆ" ಎಂದರು.

ಮೈಸೂರು ವಾರಿಯರ್ಸ್ ತಂಡ ಆಲ್ರೌಂಡರ್ ಟೀಮ್

ಆಗಸ್ಟ್ 7 ರ ಭಾನುವಾರ ಮೈಸೂರಿನ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಮೊದಲ ಆವೃತ್ತಿಯ ಪಂದ್ಯಗಳು ಆರಂಭವಾಗಲಿವೆ. ಮೈಸೂರಿನಲ್ಲಿ 18 ಪಂದ್ಯಗಳು ನಡೆಯಲಿದ್ದು ಫೈನಲ್ ಸೇರಿದಂತೆ 16 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ.

ಇದನ್ನೂ ಓದಿ : ನಾಳೆಯಿಂದ ಪ್ರೊ ಕಬಡ್ಡಿ ಲೀಗ್ ಹರಾಜು: ಯಾರ ಪಾಲಾಗ್ತಾರೆ ಬುಲ್ಸ್​ನ ಪವನ್​ ಶೆರಾವತ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.