ETV Bharat / city

ಕೆಆರ್​ಎಸ್ ಸುತ್ತಮುತ್ತ ಯಾವುದೇ ರೀತಿ ಸ್ಫೋಟ ನಡೆದರೂ ಡ್ಯಾಂಗೆ ಅಪಾಯ: ಎಂ. ಲಕ್ಷ್ಮಣ್ - ETV Bharat Kannada

ಬೇಬಿ ಬೆಟ್ಟದ ಟ್ರಯಲ್​ ಸ್ಫೋಟದ ಬಗ್ಗೆ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ ಕೆಆರ್​ಎಸ್​ ಡ್ಯಾಮ್​ಗೆ 91 ವರ್ಷ ಆಗಿದೆ. ಈ ಸಂದರ್ಭದಲ್ಲಿ ಈ ರೀತಿಯ ಪ್ರಯೋಗಗಳು ಸಲ್ಲದು. ಇಡೀ ಬೆಂಗಳೂರಿನ ನೀರಿಗೆ ಆಸರೆ ಆಗಿರುವ ಡ್ಯಾಂನ ಬಗ್ಗೆ ಕಾಳಜಿ ವಹಿಸುವ ಅಗತ್ಯ ಇದೆ ಎಂದಿದ್ದಾರೆ.

m-lakshman
ಎಂ. ಲಕ್ಷ್ಮಣ್
author img

By

Published : Jul 26, 2022, 7:44 PM IST

ಮೈಸೂರು: ಕೆಆರ್​ಎಸ್ ಜಲಾಶಯದ ಸುತ್ತಮುತ್ತ ಯಾವುದೇ ರೀತಿಯ ಸ್ಫೋಟ ನಡೆಸಿದರು ಅಣೆಕಟ್ಟೆಗೆ ಅಪಾಯವಿದ್ದು, ಟ್ರಯಲ್ ಬ್ಲಾಸ್ಟ್ ಮಾಡುವುದರಿಂದ ಸಹಾ ಅಪಾಯವಿದೆ. ಡ್ಯಾಮ್​ನ ಸುತ್ತಮುತ 25 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿ ಸ್ಫೋಟಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಕೆಆರ್​ಎಸ್ ನಿರ್ಮಾಣವಾಗಿ 91 ವರ್ಷವಾಗಿದ್ದು, ಮನುಷ್ಯನಂತೆಯೇ ಜಲಾಶಯಗಳಿಗೂ ಇಂತಿಷ್ಟು ವರ್ಷ ಆಯಸ್ಸು ಇರುತ್ತದೆ. ಕೆಆರ್​ಎಸ್ ಒಂದು ಬಂಡೆಯ ಮೇಲೆ ನಿರ್ಮಾಣವಾಗಿದ್ದು, ಎಲ್ಲೇ ಸುತ್ತಮುತ್ತ ಸ್ಫೋಟವಾದರು ಅಣೆಕಟ್ಟೆ ಕೆಲವು ಸೆಕೆಂಡ್ ಕಂಪನದ ಅನುಭವವಾಗುತ್ತದೆ ಎಂದು ವೈಜ್ಞಾನಿಕವಾಗಿ ದೃಢವಾಗಿದೆ. ಈಗ ಕೆಆರ್​​ಎಸ್ ಸಂಪೂರ್ಣ ಭರ್ತಿಯಾಗಿದ್ದು, ಇಂತಹ ಸಂದರ್ಭದಲ್ಲಿ ಪರಿಕ್ಷಾರ್ಥ ಸ್ಫೋಟದ ಪ್ರಯೋಗಕ್ಕೆ ವಿಜ್ಞಾನಿಗಳು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.

ಕೆಆರ್​ಎಸ್ ಜಲಾಶಯದ ಸುತ್ತಮುತ್ತ ಯಾವುದೇ ರೀತಿ ಸ್ಫೋಟ ನಡೆದರೂ ಡ್ಯಾಂಗೆ ಅಪಾಯ

ಬಿ ವೈ ವಿಜಯೇಂದ್ರನಿಗೆ ಟಿಕೇಟ್ ನೀಡುವುದಿಲ್ಲ: ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಯೂಸ್ ಅಂಡ್ ತ್ರೂ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಅವರನ್ನು ಬಳಸಿಕೊಂಡು ಬಿಸಾಕುತ್ತಾರೆ, ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಹೆಸರನ್ನು ಬಳಸಿಕೊಳ್ಳುತ್ತಾರೆ. ಅವರ ಮಗ ಬಿ ವೈ ವಿಜಯೇಂದ್ರನಿಗೆ ಟಿಕೆಟ್ ನೀಡುವುದಿಲ್ಲ ಇದನ್ನು ವೀರಶೈವರು ಅರ್ಥಮಾಡಿಕೊಳ್ಳಬೇಕು ಎಂದರು.

ಸಂಸದ ಪ್ರತಾಪ್ ಸಿಂಹ ವಿರುದ್ಧ ನಾನು ಮಾಡಿದ ಪ್ರತಿಭಟನೆಗಳಿಗೆ ಮೈಸೂರಿನ ವಿವಿಧ ಠಾಣೆಗಳಲ್ಲಿ 8 ರಿಂದ 10 ಪ್ರಕರಣಗಳು ದಾಖಲಾಗಿದ್ದು, ಜೊತೆಗೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಪ್ರತಾಪ್ ಸಿಂಹ ನನ್ನನ್ನು ಹೆದರಿಸುತ್ತಾರೆ. ಅವರು ಪೊಲೀಸ್ ಠಾಣೆಗೆ ಹೋಗುವ ಬದಲು ನ್ಯಾಯಾಲಯಕ್ಕೆ ಹೋಗಿ ಪ್ರಶ್ನೆ ಮಾಡಲಿ ಎಂದು ಲಕ್ಷ್ಮಣ್ ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಕಾಂಗ್ರೆಸ್​ ಪ್ರತಿಭಟನಾ ವೇದಿಕೆಗೆ ಆಗಮಿಸಿದ್ದ ನಟಿ ಭಾವನಾಗೆ ಕಾರ್ಯಕರ್ತರಿಂದ ತರಾಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.