ETV Bharat / city

ಮೈಸೂರು: ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಆತ್ಮಹತ್ಯೆ - ನವವಿವಾಹಿತೆ ಆತ್ಮಹತ್ಯೆಗೆ ಶರಣು

ಪಿ.ಮರಳ್ಳಿ ಗ್ರಾಮದ ದಿವ್ಯಾ ನೇಣಿಗೆ ಶರಣಾಗಿದ್ದಾರೆ. ಪೋಷಕರು ದಿವ್ಯಾಳ ಪತಿ, ಅತ್ತೆ, ಮಾವ, ನಾದಿನಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ತಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

lady committed suicide at mysore
ಮೈಸೂರು ಆತ್ಮಹತ್ಯೆ ಪ್ರಕರಣ
author img

By

Published : Oct 27, 2021, 12:52 PM IST

ಮೈಸೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಿ‌. ನರಸೀಪುರ ತಾಲೂಕಿನ ಪಿ. ಮರಳ್ಳಿ ಗ್ರಾಮದಲ್ಲಿ ನಡೆದಿದೆ.

lady committed suicide at mysore
ನವವಿವಾಹಿತೆ ದಿವ್ಯಾ ಆತ್ಮಹತ್ಯೆಗೆ ಶರಣು

ದಿವ್ಯಾ(23) ಮೃತ ದುರ್ದೈವಿ. ಇವರು 9 ತಿಂಗಳ ಹಿಂದಷ್ಟೇ ತಿ. ನರಸೀಪುರದ ದೀಪಕ್ ಎಂಬಾತನನ್ನು ವಿವಾಹವಾಗಿದ್ದರು. ಬೆಂಗಳೂರಿನಲ್ಲಿ ಹಸು ಸಾಕಣೆ ಮಾಡಿಕೊಂಡಿದ್ದ ದೀಪಕ್ ಮದುವೆ ನಂತರ ತಿ. ನರಸೀಪುರದಲ್ಲಿ ನೆಲೆಸಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದ ಈತ, ತನ್ನ ತಂದೆಗೆ ಆಸ್ತಿ ಬರೆದುಕೊಡುವಂತೆ ಒತ್ತಾಯಿಸುತ್ತಿದ್ದ. ಈ ವಿಚಾರದಲ್ಲಿ ಆಗಾಗ ಗಲಾಟೆ ಆಗುತ್ತಿತ್ತು. ದಾರಿ ತಪ್ಪಿದ್ದ ಮಗನಿಗೆ ಆಸ್ತಿ ಕೊಡಲು ತಂದೆ ನಿರಾಕರಿಸಿದ್ದರೆಂದು ತಿಳಿದುಬಂದಿದೆ. ಇದರಿಂದ ಮತ್ತಷ್ಟು ಕುಡಿತದ ಚಟಕ್ಕೆ ಬಲಿಯಾಗಿ ಪತ್ನಿಗೆ ಕಿರುಕುಳ ಕೊಡುತ್ತಿದ್ದ. ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸಲು ಶುರು ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಕತ್ತಲಲ್ಲಿ ಹುಬ್ಬಳ್ಳಿ ಭೂಮಾಪನ ಕಚೇರಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಬೇಸರ

ಗಂಡನ ಕಿರುಕುಳಕ್ಕೆ ಬೇಸತ್ತ ದಿವ್ಯಾ ನೇಣಿಗೆ ಶರಣಾಗಿದ್ದಾಳೆ ಎಂದು ಆರೋಪಿಸಿರುವ ಪೋಷಕರು ದಿವ್ಯಾಳ ಪತಿ, ಅತ್ತೆ, ಮಾವ, ನಾದಿನಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ತಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.