ETV Bharat / city

‘ಏಪ್ರಿಲ್ 18 ಮತದಾನ ಮಾಡಿ'... ಮಾನವ ಸರಪಳಿ ರಚಿಸಿ ವಿದ್ಯಾರ್ಥಿಗಳಿಂದ ಜಾಗೃತಿ - ಮೈಸೂರು ಲೋಕಸಭೆ

ಮಾನವ ಸರಪಳಿ ರಚಿಸಿ ಮತದಾನದ ಬಗ್ಗೆ ವಿದ್ಯಾರ್ಥಿಗಳಿಂದ ಜಾಗೃತಿ. ಸಾಂಸ್ಕೃತಿ ನಗರಿ ಮೈಸೂರಲ್ಲಿ ಮತಹಕ್ಕು ಚಲಾಯಿಸುವಂತೆ ಸಂದೇಶ ರವಾನೆ.

ಮಾನವ ಸರಪಣಿ ಮೂಲಕ ವಿದ್ಯಾರ್ಥಿಗಳಿಂದ ಜಾಗೃತಿ
author img

By

Published : Apr 6, 2019, 4:24 AM IST

Updated : Apr 6, 2019, 7:25 AM IST

ಮೈಸೂರು: ಮತದಾನ ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯ. ಅಂತೆಯೇ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಸೇರಿದಂತೆ ಹಲವು ಸಂಸ್ಥೆಗಳು ಕಸರತ್ತು ನಡೆಸಿವೆ.

ಸಾಂಸ್ಕೃತಿಕ ನಗರ ಮೈಸೂರಲ್ಲಿ ಕೂಡ ಮತದಾನ ಮಾಡುವಂತೆ ವಿಶೇಷವಾಗಿ ಜಾಗೃತಿ ಕಾರ್ಯ ಮಾಡಲಾಯಿತು. ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು 'ಏಪ್ರಿಲ್ 18 ಮತದಾನ ಮಾಡಿ' ಎಂದು ಮಾನವ ಸರಪಳಿ ರಚಿಸಿ ಮತದಾನದ ಬಗ್ಗೆ ಅರಿವು ಮೂಡಿಸಿದರು.

student awareness
ಮಾನವ ಸರಪಣಿ ಮೂಲಕ ವಿದ್ಯಾರ್ಥಿಗಳಿಂದ ಜಾಗೃತಿ

ಮೈಸೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಎಸ್.ಜೆ.ಸಿ.ಇ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ ಬೆಟಸೂರಮಠ ಅವರು ಬೋಧಿಸಿ ನಂತರ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ರಾಜ. ನಿಮ್ಮ ಮತಕ್ಕೆ ನೀವೇ ಯಜಮಾನರು. ಯಾವುದೇ ಜಾತಿ, ಧರ್ಮ, ಮತ-ಪಂತಗಳಿಗೆ ಒಳಗಾಗದೇ ನಿರ್ಭೀತಿಯಿಂದ ನೈತಿಕವಾಗಿ ಮತ ಚಲಾಯಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಿಇಒ ಕೆ.ಜ್ಯೋತಿ ಅವರು ಮಾತನಾಡಿ ಯುವ ಮತದಾರರಿಗೆ ಹೊಸ ಮತ್ತು ವಿನೂತನ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಇರುತ್ತದೆ. ಮತದಾನದಲ್ಲಿ ಯುವ ಸಮೂಹದ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದರು.

ಮಾನವ ಸರಪಣಿ ರಚಿಸಿ ಮತದಾನ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು
ಮೈಸೂರು: ಲೋಕಸಭಾ ಚುನಾವಣೆ ದಿನೇ ದಿನೇ ರಂಗೇರುತ್ತಿದ್ದು, ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಪಾಲ್ಗೊಳ್ಳಿ ಎಂಬ ಉದ್ಚೇಶದಿಂದ ಚುನಾವಣಾ ಹೊಸ ಹೊಸ ಐಡಿಯಾಗಳ ಹುಡುಕುತ್ತಿದೆ. 
‘ಏಪ್ರಿಲ್ ೧೮ ಮತದಾನ ಮಾಡಿ  ಎಂಬ ಸಂದೇಶ ಸಾರುವ ಮಾನವ ರಚನೆಯನ್ನು ೨ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ನಿರ್ಮಾಣ ಮಾಡಿ ವಿನೂತನವಾಗಿ ಮತದಾರರಿಗೆ ಜಾಗೃತಿ ಮೂಡಿಸಿದರು. 
ಮೈಸೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಎಸ್.ಜೆ.ಸಿ.ಇ ಇಂಜಿನಿಯರಿಂಗ್ ಕಾಲೇಜು  ಕ್ರೀಡಾಂಗಣದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ ಬೆಟಸೂರಮಠ ಅವರು ಬೋಧಿಸಿ ನಂತರ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೆ ರಾಜನಾಗಿರುತ್ತಾನೆ. ನಿಮ್ಮ ಮತಕ್ಕೆ ನಿವೇ ಯಜಮಾನರು ಪ್ರಜಾಪ್ರಭಯತ್ವದ ಉಳಿವಿಗೆ ಯಾವುದೇ ಜಾತಿ, ಧರ್ಮ, ಮತ-ಪಂತಗಳಿಗೆ ಒಳಗಾಗದೇ ನಿರ್ಭೀತಿಯಿಂದ ನೈತಿಕವಾಗಿ ಮತ ಚಲಾಯಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಜ್ಯೋತಿ ಅವರು ಮಾತನಾಡಿ ಯುವ ಮತದಾರರಿಗೆ ಹೊಸ ಮತ್ತು ವಿನೂತನ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಇರುತ್ತದೆ. ಮತದಾನದಲ್ಲಿ ಯುವ ಸಮೂಹದ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದರು.

Last Updated : Apr 6, 2019, 7:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.