ಮೈಸೂರು: ಸರಗೂರು ಸಮೀಪದ ಹಳೇಹೆಗ್ಗುಡಿಲು ಗ್ರಾಮದ ರಾಮಚಂದ್ರ ಎಂಬ ಯುವಕನಿಗೆ ಎರಡೂ ಕಿಡ್ನಿ ವೈಫಲ್ಯವಾಗಿವೆ. ಈ ಹಿನ್ನೆಲೆ ಇಡೀ ಕುಟುಂಬವೀಗ ಸಂಕಷ್ಟದಲ್ಲಿ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ರಾಮಚಂದ್ರನಿಗೆ ಕಳೆದ ನಾಲ್ಕು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದಾಗ ಎರಡೂ ಕಿಡ್ನಿ ವೈಫಲ್ಯವಾಗಿದೆ ಎಂದು ತಿಳಿದುಬಂದಿದೆ. ಅಂದಿನಿಂದ ಇಂದಿನವರೆಗೂ ಸುಮಾರು 70 ಕಿ.ಮೀ ದೂರ ಇರುವ ಮೈಸೂರಿಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಂಡು ಬರುತ್ತಿದ್ದಾರೆ. ಈವರೆಗೆ ಚಿಕಿತ್ಸೆಗೆ ಸುಮಾರು 4 ಲಕ್ಷ ರೂ. ಖರ್ಚಾಗಿದೆಯಂತೆ.
ಗ್ರಾಮಕ್ಕೆ 12 ಕಿ.ಮೀ. ನಷ್ಟು ದೂರ ಇರುವ ಹೆಚ್.ಡಿ ಕೋಟೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ರೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಈತನಿಗೆ ಇಲ್ಲಿ ಡಲಾಲಿಸಿಸ್ ಮಾಡುತ್ತಿಲ್ಲ. ಹೀಗಾಗಿ ದೂರದ ಮೈಸೂರಿಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ಇಷ್ಟೆಲ್ಲ ಸಮಸ್ಯೆ ನಡುವೆ ತಾಲೂಕಿನ ಶಾಸಕರಾದ ಅನಿಲ್ ಚಿಕ್ಕಮಾದು ಅವರ ಬಳಿ ಹೋಗಿ ಹೆಚ್.ಡಿ ಕೋಟೆಯಲ್ಲಿ ಡಲಾಲಿಸಿಸ್ಗೆ ಅವಕಾಶ ಮಾಡಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದರೂ ಅದೂ ಸಾಧ್ಯವಾಗಿಲ್ಲ. ಇತ್ತ ಮೊದಲು ನೀವು ಖರ್ಚು ಮಾಡಿ ಆಪರೇಷನ್ ಮಾಡಿಸಿ ನಂತರ ನಿಮಗೆ ಸರ್ಕಾರದಿಂದ ಹಣ ಕೊಡಿಸುತ್ತೇವೆ ಎಂದು ಯುವಕನ ಪೋಷಕರಿಗೆ ಶಾಸಕ ಹೇಳಿ ಕಳುಹಿಸಿದ್ದಾರಂತೆ.
ಆಪರೇಷನ್ಗೆ ಸುಮಾರು 12 ಲಕ್ಷ ರೂ. ಖರ್ಚಾಗಲಿದ್ದು, ಅದನ್ನು ಭರಿಸುವ ಶಕ್ತಿ ಈ ಬಡ ಕುಟುಂಬಕ್ಕೆ ಇಲ್ಲ. ಹೀಗಾಗಿ ಯುವಕ ರಾಮಚಂದ್ರನು ಸಹೃದಯಿಗಳಿಂದ ಸಹಾಯ ಕೋರಿದ್ದು, ನನ್ನ ಜೀವ ಉಳಿಸಿ ಎಂದು ಅಂಗಲಾಚುತ್ತಿದ್ದಾನೆ. ಈತನಿಗೆ ಸಹಾಯ ಮಾಡಬಯಸುವವರು ಈ ಬ್ಯಾಂಕ್ ಖಾತೆಗೆ ಹಣ ಹಾಕಬಹುದಾಗಿದೆ.
- ಬ್ಯಾಂಕ್ ಖಾತೆ
Name: Ramachandra
canara bank Saraguru branch
account number: 4343101011813.
Ifsc code:CNRB0004343
ಇದನ್ನೂ ಓದಿ: ಭಾರತ್ ಬಂದ್ ಹಿನ್ನೆಲೆ: ಸೂಕ್ತ ಭದ್ರತೆ ಕೈಗೊಳ್ಳಲು ಡಿಸಿಪಿಗಳಿಗೆ ಕಮಲ್ ಪಂತ್ ಸೂಚನೆ
ನಾವು ಆತನಿಗೆ ಕಿಡ್ನಿ ಕೊಡಲು ಮುಂದಾಗಿದ್ದೇವೆ. ಆದರೆ ಇದಕ್ಕೆ ತಗಲುವ ವೆಚ್ಚವನ್ನು ನಮ್ಮಲ್ಲಿ ಭರಿಸಲಾಗುತ್ತಿಲ್ಲ. ಶಾಸಕರೂ ಸಹ ನಮಗೆ ಸಹಾಯ ಮಾಡಲು ಮುಂದಾಗುತ್ತಿಲ್ಲ. ಹೀಗಾಗಿ ನಮ್ಮ ಮಗನ ನೋವನ್ನು ಕಣ್ಣಾರೆ ಕಂಡರೂ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದೇವೆ ಎಂದು ರಾಮಚಂದ್ರನ ಪೋಷಕರು ಅಳಲು ತೋಡಿಕೊಂಡಿದ್ದಾರೆ.